ರಾಜೇಂದ್ರ ಶ್ರೀಗಳ ಜಯಂತಿ ಅಂಗವಾಗಿ ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರದ ನಿರ್ವಹಣೆಗಾಗಿ ಒಂದು ಲಕ್ಷ ರೂ. ಚೆಕ್ ನೀಡಲಾಯಿತು. ಪಿ.ಅನುಷಾ, ಎಸ್.ಶಿವಕುಮಾರಸ್ವಾಮಿ, ಬಿ.ನಿರಂಜನಮೂರ್ತಿ, ಪ್ರೊ.ಮೊರಬದ ಮಲ್ಲಿಕಾರ್ಜುನ ಇನ್ನಿತರರಿದ್ದರು. 
ಮೈಸೂರು

ಮೃಗಾಲಯಕ್ಕೆ ಸುತ್ತೂರು ಮಠದಿಂದ 1 ಲಕ್ಷ ರೂ. ಚೆಕ್

ಪ್ರಮುಖ ಮುಖ್ಯಾಂಶಗಳು

  • ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರ ನಿರ್ವಹಣೆಗಾಗಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯ
  • ಪ್ರಾಣಿ ಮತ್ತು ಪಕ್ಷಿಸಂಕುಲದ ಆಹಾರ ಮತ್ತು ಅವುಗಳ ಪಾಲನೆಗೆ ಹಣ ಬಳಕೆ

ಮೈಸೂರು: ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ ಮಹೋತ್ಸವದ ಅಂಗವಾಗಿ ಸುತ್ತೂರು ಮಠದಿಂದ ಪ್ರತಿ ವರ್ಷದಂತೆ ನಗರದ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರದ ನಿರ್ವಹಣೆಗಾಗಿ ಒಂದು ಲಕ್ಷ ರೂ. ನೀಡಲಾಯಿತು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ಅವರಿಗೆ ಚೆಕ್‌ಅನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ನೀಡಿದರು.
ಪಿ.ಅನುಷಾ ಮಾತನಾಡಿ, ಪ್ರತಿವರ್ಷವೂ ರಾಜೇಂದ್ರ ಶ್ರೀಗಳ ಜಯಂತಿಯಂದು ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರ ನಿರ್ವಹಣೆಗಾಗಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಇದರಿಂದ ಮೃಗಾಲಯಕ್ಕೆ ಬಹಳ ಅನುಕೂಲವಾಗುತ್ತದೆ.
 ಇದನ್ನು ಪ್ರಾಣಿ ಮತ್ತು ಪಕ್ಷಿಸಂಕುಲದ ಆಹಾರ ಮತ್ತು ಅವುಗಳ ಪಾಲನೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸುತ್ತೂರು ಶ್ರೀಗಳು ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಕಾಳಜಿಯನ್ನು ಹೊಂದಿರುವುದನ್ನು ಇದು ಸೂಚಿಸುತ್ತದೆ. ಇದೇ ರೀತಿ ಬೇರೆ ಬೇರೆ ಸಂಘ ಸಂಸ್ಥೆಗಳು ಸಹಾಯಹಸ್ತ ಚಾಚಬೇಕು ಎಂದು ಕೋರಿದರು. 
ವಲಯ ಅರಣ್ಯಾಧಿಕಾರಿ ಎಂ.ಆರ್.ಧನ್ಯಶ್ರೀ, ಉಪನಿರ್ದೇಶಕ ಲಕ್ಷ್ಮೀ ಕಾಂತ್, ಪ್ರೊ.ಮೊರಬದ ಮಲ್ಲಿಕಾರ್ಜುನ, ಬಿ. ನಿರಂಜನಮೂರ್ತಿ ಇನ್ನಿತರರಿದ್ದರು.