- ಭೂದಾಖಲೆ ನೀಡಲು ಮದ್ಯದಂಗಡಿಯಲ್ಲೇ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆಯ ಸರ್ವೇಯರ್
- ಸರ್ವೆಯರ್ ಕೆ.ಆರ್.ರವೀಂದ್ರ ಬಲೆಗೆ ಬಿದ್ದವರು.
- 11ಎ ದಾಖಲೆ ನೀಡಲು 1 ಲಕ್ಷ ರೂ. ಬೇಡಿಕೆ
ಮೈಸೂರು: ಭೂದಾಖಲೆ ನೀಡಲು ಮದ್ಯದಂಗಡಿಯಲ್ಲೇ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆಯ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಪಿರಿಯಾಪಟ್ಟಣದ ಭೂ ದಾಖಲೆಯ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೆ.ಆರ್.ರವೀಂದ್ರ ಬಲೆಗೆ ಬಿದ್ದವರು.
ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರು ತಮ್ಮ ಜಮೀನು ಸಂಬಂಧ 11ಎ ದಾಖಲೆಯನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ದಾಖಲೆ ನೀಡಲು ರವೀಂದ್ರ ಅವರು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.
ಈ ಕುರಿತು ಜಮೀನು ಮಾಲೀಕರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಾರ್‌ನಲ್ಲಿ 30 ಸಾವಿರ ರೂ. ಸ್ವೀಕರಿಸುವಾಗ ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಿದ್ದಾರೆ.