ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಆಯೋಜಿಸಿದ್ದ ನಕ್ಷತ್ರ ಡ್ಯಾನ್ಸ್ ಶಾಲೆಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಎಂಪಿವಿಎಲ್ ಅಧ್ಯಕ್ಷ ಎಚ್.ಡಿ.ಗಣೇಶ್ ಉದ್ಘಾಟಿಸಿದರು. ಈ.ಪಿ.ಲೋಕೇಶ್, ಸುಧಾಕರ್, ಲಕ್ಕಣ್ಣ, ಭವ್ಯಾ ಮಂಜುನಾಥ್ ಇತರರು ಇದ್ದರು.
- ಮೈಲ್ಯಾಕ್ ಅಧ್ಯಕ್ಷ ಎಚ್.ಡಿ.ಗಣೇಶ್ ಅಭಿಪ್ರಾಯ
ಪಿರಿಯಾಪಟ್ಟಣ: ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲ ಚಟುವಟಿಕೆ ಗುರುತಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ನಿಗಮದ ಅಧ್ಯಕ್ಷ ಎಚ್.ಡಿ.ಗಣೇಶ್ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಇತ್ತೀಚಿಗೆ ನಡೆದ ನಕ್ಷತ್ರ ಡಾನ್ಸ್ ಶಾಲೆಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಜತೆಗೆ ಅವರಲ್ಲಿರುವ ವಿಶೇಷ ಆಸಕ್ತಿಕರ ವಿಷಯಗಳನ್ನು ತಿಳಿಯಲು ಬೇಸಿಗೆ ಶಿಬಿರಗಳು ಒಂದು ಉತ್ತಮ ವೇದಿಕೆಯಾಗಿವೆ ಎಂದರು.
ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬೇಸಿಗೆ ಶಿಬಿರಗಳನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿ ಕಳೆದ ಐದು ವರ್ಷಗಳಿಂದ ಪಟ್ಟಣದಲ್ಲಿ ನಕ್ಷತ್ರ ಡಾನ್ಸ್ ಸ್ಟುಡಿಯೋ ವತಿಯಿಂದ ನಡೆಸುತ್ತಿರುವ ಬೇಸಿಗೆ ಶಿಬಿರದ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈ.ಪಿ.ಲೋಕೇಶ್ ಮಾತನಾಡಿ, ಪಾಲಕರು ಪಠ್ಯದ ಜತೆಗೆ ತಮ್ಮ ಮಕ್ಕಳಲ್ಲಿನ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಇಂತಹ ಶಿಬಿರಗಳಿಗೆ ಸೇರಿಸುವುದರಿಂದ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದರು.
ನಕ್ಷತ್ರ ಡ್ಯಾನ್ಸ್ ಸ್ಟುಡಿಯೋ ಅಧ್ಯಕ್ಷೆ ಭವ್ಯಾ ಮಂಜುನಾಥ್ ಮಾತನಾಡಿ, ನೃತ್ಯ ಸಂಯೋಜಕರಾದ ಪ್ರಸನ್ನ ನೇತೃತ್ವದಲ್ಲಿ ಡಾನ್ಸ್ ಸ್ಟುಡಿಯೋ ಪ್ರಾರಂಭಿಸಿ ವಿದ್ಯಾರ್ಥಿಗಳಲ್ಲಿನ ನೃತ್ಯ, ಸಂಗೀತ, ಕಲೆ ಹಾಗೂ ಚಿತ್ರಕಲೆ ಸೇರಿದಂತೆ ವಿಶೇಷ ಗುಣಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಬಿಜಿಎಸ್ ಸಂಸ್ಥೆ ಆಡಳಿತಾಧಿಕಾರಿ ಸುಧಾಕರ್, ಮುಖ್ಯ ಶಿಕ್ಷಕರಾದ ಲಕ್ಕಣ್ಣ, ಕೃಷ್ಣಪ್ಪ, ಮುಕುಂದ, ಪ್ರಸನ್ನ, ಶಿಕ್ಷಕರಾದ ವಾಸವಿ, ಪಲ್ಲವಿ, ನಿಶಾ, ಸತೀಶ್, ಪೃಥ್ವಿ, ವೇಣು, ಚಂದನ್ ಇತರರು ಇದ್ದರು.