children's talents 
ಮೈಸೂರು

ಮಕ್ಕಳ ಪ್ರತಿಭೆಗೆ ಬೇಸಿಗೆ ಶಿಬಿರ ಉತ್ತಮ ವೇದಿಕೆ

ಬೇಸಿಗೆ ಶಿಬಿರಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ ಎಂದು ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.
ನಗರದ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ರಂಗಾಂತರಂಗ ಮೈಸೂರು ವತಿಯಿಂದ ಸೋಮವಾರ ಆಯೋಜಿಸಿದ್ದ ‘ಕಲರವ ಮಕ್ಕಳ ಬೇಸಿಗೆ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ಸಾಹಿತ್ಯದ ಬಗ್ಗೆ ಚಿಕ್ಕ ವಯಸ್ಸಿನಲ್ಲಿ ಆಸಕ್ತಿ ಮೂಡಿಸುವುದರಿಂದ ಒಳ್ಳೆಯ ಸಂಸ್ಕೃತಿ ಆಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗುತ್ತಾರೆ. ಮಕ್ಕಳು ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತವನ್ನು ಕಲಿತು ಉತ್ತಮ ವ್ಯಕ್ತಿ ತ್ವರೂಪಿಸಿಕೊಳ್ಳವುದಕ್ಕೆ ಬೇಸಿಗೆ ಶಿಬಿರಗಳು ಉತ್ತಮ ಪಾತ್ರವಹಿಸುತ್ತವೆ ಎಂದರು.
ಶಿಬಿರದಲ್ಲಿ ಪಡೆದ ತರಬೇತಿ ಮಕ್ಕಳ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮಕ್ಕಳ ಬೇಸಿಗೆ ಶಿಬಿರ ಆಯೋಜನೆಯಲ್ಲಿ ರಂಗಾಂತರಂಗ ಪ್ರಮುಖ ಪಾತ್ರ ವಹಿಸಿದೆ ಎಂದರು.
ಚಿಂತಕ ನಾ.ದಿವಾಕರ ಮಾತನಾಡಿ, ರಂಗಾಂತರಂಗ ಸಂಸ್ಥೆಯು ಎಳೆ ಮಕ್ಕಳಿಗೆ ಕಲಿಕಾ ಚಟುವಟಿಕೆ ಕಲಿಸಿ, ಉತ್ತಮ ವ್ಯಕ್ತಿತ್ವ ರೂಪಿಸುತ್ತಿದೆ ಎಂದರು.
ಸಮಾಜ ಸೇವಕರಾದ ಸೀತರಾಮನ್, ಪ್ರಮುಖರಾದ ದೊರೆಸ್ವಾಮಿ, ಬಿ.ಆರ್.ರಂಗಸ್ವಾಮಿ ಇದ್ದರು.