ಎಂಎಂಕೆ ಮತ್ತು ಎಸ್‌ಡಿಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿನಿಯರ ಪಾಲಕರಿಗೆ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು. ಎಸ್.ಪಿ. ಶೋಭಾ, ಪ್ರೊ. ಎನ್.ಭಾರತಿ, ಎಸ್.ಲತಾ ಇತರರಿದ್ದರು.
- ಪ್ರಾಂಶುಪಾಲೆ ಎಸ್.ಪಿ.ಶೋಭಾ ಅಭಿಪ್ರಾಯ
ಪಾಲಕರು ಹಾಗೂ ಶಿಕ್ಷಕರ ಪ್ರಾಮಾಣಿಕ ಪರಿಶ್ರಮದಿಂದ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆ ಸಾಧ್ಯ ಎಂದು ಎಂಎಂಕೆ ಮತ್ತು ಎಸ್‌ಡಿಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಸ್.ಪಿ.ಶೋಭಾ ತಿಳಿಸಿದರು.
ಎಂಎಂಕೆ ಮತ್ತು ಎಸ್‌ಡಿಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪಾಲಕರಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಏಳಿಗೆಯಲ್ಲಿ ಶಿಕ್ಷಕ, ಪಾಲಕರಿಬ್ಬರ ಗುರಿ ಒಂದೇ ಆಗಿದ್ದು, ಸಾಗುವ ದಾರಿ ಬೇರೆ ಬೇರೆಯಾಗಿದೆ. ಒಟ್ಟಾರೆ ಇವರಿಬ್ಬರ ಶ್ರಮದಿಂದ ವಿದ್ಯಾರ್ಥಿಗಳು ಗುರಿ ತಲುಪಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ ಮಾತನಾಡಿ, ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿ ಜೀವನದ ಮಹತ್ವದ ತಿರುವು. ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿ ಮಾಡುವುದು ಶಿಕ್ಷಕ-ಪಾಲಕರ ಜವಾಬ್ದಾರಿ ಎಂದರು.
ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಟಿ.ನಂದಿನಿ ಮಾತನಾಡಿ, ಕಾಲೇಜಿನ ನಿಯಮಾವಳಿಗಳನ್ನು ಪಾಲಕರಿಗೆ ತಿಳಿಸಿದರು.
ಭೌತಶಾಸ್ತ್ರ ಉಪನ್ಯಾಸಕಿ ಎಸ್.ಲತಾ ಅವರು ಕಳೆದ ಶೈಕ್ಷಣಿಕ ವರ್ಷದ ವಿವಿಧ ಚಟುವಟಿಕೆಗಳ ಬಗ್ಗೆ ಪಿಪಿಟಿ ಪ್ರಸ್ತುತಪಡಿಸಿದರು.
ಇದೇ ವೇಳೆ 2025-26ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಮತ್ತು ಜಿಲ್ಲೆಗೆ 4ನೇ ಸ್ಥಾನವನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಚಿರಸ್ವಿ ಅವರನ್ನು ಅಭಿನಂದಿಸಲಾಯಿತು.