ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ‘ನಾವು ಪ್ರತಿಷ್ಠಾನ ಸಂಸ್ಥೆ’ ಕೊಡಗು ವತಿಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಸಾದ್ ಮಾತನಾಡಿದರು. ನಿಂಗಪ್ಪ , ಗೌತಮ್ ಕಿರಗಂದೂರು, ಸುಮನ್ ಮ್ಯಾಥ್ಯೂ, ಸಿ.ಸವಿತಾ, ಸುಮನಾ, ಹೇಮಂತ್, ಲೋಕೇಶ್, ಗಿರೀಶ್ ಇತರರು ಇದ್ದರು.
- ಸಮಾಜ ವಿಜ್ಞಾನ ಶಿಕ್ಷಕರ ಮೂಲಕ 7 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಟುವಟಿಕೆಯ ಮೂಲಕ ತರಬೇತಿ
- ವಿಮರ್ಶತ್ಮಕ ಆಲೋಚನೆ ಅಭಿವೃದ್ದಿ ಪಡಿಸುವುದು, ಪ್ರಕೃತಿಯೊಂದಿಗೆ ಸಾಮರಸ್ಯ ಸೇರಿದಂತೆ ವಿವಿಧ ವಿಷಯ ಮಾಹಿತಿ
ಮೈಸೂರು:ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ‘ನಾವು ಪ್ರತಿಷ್ಠಾನ ಸಂಸ್ಥೆ’ ಕೊಡಗು ವತಿಯಿಂದ ಸಹಯೋಗದಲ್ಲಿ ಮೈಸೂರು ತಾಲೂಕು ವರಕೋಡಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ 2 ದಿನಗಳ ತರಬೇತಿ ಆಯೋಜಿಸಲಾಗಿತ್ತು.
ಜಿಲ್ಲಾ ಸಮನ್ವಯ ಅಧಿಕಾರಿ ಪ್ರಸಾದ್ ಮಾತನಾಡಿ, ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಲು ವಿದ್ಯಾರ್ಥಿಗಳ ಜೀವನ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಲು ನಾಯಕತ್ವದ ಗುಣಗಳು ಬೆಳೆಸಲು ಸಕ್ರಿಯ ನಾಗರಿಕರನ್ನಾಗಿ ರೂಪಿಸಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
‘ನಾವು ಪ್ರತಿಷ್ಠಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಸುಮನ್ ಮ್ಯಾಥ್ಯೂ ಮಾತನಾಡಿ, ಈ ತರಬೇತಿಯಲ್ಲಿ ಹೆಣ್ಣುಮಕ್ಕಳ ಋತು ಚಕ್ರದ ಬಗ್ಗೆ ಅರಿವು, ಆನ್‌ಲೈನ್ ಸುರಕ್ಷತೆ, ಹವಾಮಾನ ಬದಲಾವಣೆ, ಘನತ್ಯಾಜ್ಯ ನಿರ್ವಾಹಣೆ,ಮಕ್ಕಳ ಹಕ್ಕುಗಳು, ಲಿಂಗ ಸಮಾನತೆ, ವೈಯುಕ್ತಿಕ ನೈತಿಕತೆ, ಸ್ಥಳೀಯ ಸರ್ಕಾರ, ಅನುಭೂತಿ ಮತ್ತು ಸಮಾನತೆ, ವಿಮರ್ಶತ್ಮಕ ಆಲೋಚನೆ ಅಭಿವೃದ್ದಿ ಪಡಿಸುವುದು, ಪ್ರಕೃತಿಯೊಂದಿಗೆ ಸಾಮರಸ್ಯ ಸೇರಿದಂತೆ ವಿವಿಧ ವಿಷಯ ತಿಳಿಸಿಕೊಡಲಾಗುತ್ತಿದೆ ಎಂದರು.
ಹದಿನೇಳು ವಿಷಯಗಳನ್ನು ಒಳಗೊಂಡಂತೆ ಸಮಾಜ ವಿಜ್ಞಾನ ಶಿಕ್ಷಕರ ಮೂಲಕ 7 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಟುವಟಿಕೆಯ ಮೂಲಕ ತರಬೇತಿಯಲ್ಲಿ ತಿಳಿಸಲಾಗುತ್ತದೆ ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲ ನಿಂಗಪ್ಪ ,ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ತರಬೇತುದಾರರಾದ ಸಿ.ಸವಿತಾ, ಸುಮನಾ, ವಸತಿ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಹೇಮಂತ್, ಕಾರ್ಯದರ್ಶಿ ಲೋಕೇಶ್, ನಾವು ಸಂಸ್ಥೆಯ ಗಿರೀಶ್ ಇತರರು ಇದ್ದರು.