ಮೈಸೂರು ನಗರದ ರೋಟರಿ ಶಾಲಾ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಂುುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಪ್ರೋತ್ಸಾಹ ಧನ ಹಾಗೂ ಸಾಧಕರಿಗೆ ಸನ್ಮಾನ ಕಾಂರ್ುಕ್ರಮವನ್ನು ಸಾಹಿತಿ ಪ್ರೊ.ಎಸ್.ಶಿವರಾಜಪ್ಪ ಉದ್ಘಾಟಿಸಿದರು. ಚಕ್ರವರ್ತಿ ಎಸ್. ಶ್ರೀಧರ್, ಡಾ.ಎನ್.ಎಸ್. ಅನ್ನಪೂರ್ಣ, ಪ್ರೊ.ವಿಶ್ವನಾಥ್, ಡಾ ಪಿ ನವೀನ್ ಕುಮಾರ್ ಹಾಗೂ ಇತರರು ಇದ್ದರು. 
ಮೈಸೂರು

ವಿದ್ಯಾರ್ಥಿಗಳಿಗೆ ಪರಿಶ್ರಮ, ಶಿಸ್ತು ಅಗತ್ಯ : ಪ್ರೊ.ಎಸ್. ಶಿವರಾಜಪ್ಪ

ಸದೇಶ್ ಕಾರ್ಮಾಡ್
ಮೈಸೂರು: ನಗರದ ಜೆಎಲ್‌ಬಿ ರಸ್ತೆಯ ರೋಟರಿ ಶಾಲಾ ಸಭಾಂಗಣದಲ್ಲಿ ಕಮಲಮ್ಮ, ಜಿ.ಎ. ಶಿವಲಿಂಗಯ್ಯ ಧಾರ್ಮಿಕ ದತ್ತಿ ಸಂಸ್ಥೆ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಸಾಧಕರಿಗೆ ಭಾನುವಾರ ಸನ್ಮಾನ ಕಾಂರ್ುಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಪರಿಶ್ರಮ, ಶಿಸ್ತು ಹಾಗೂ ಗುರಿ ಹೊಂದಿದ ಅಧ್ಯಂುನದ ಮೂಲಕ ಉತ್ತಮ ಸಾಧನೆ ವಾಡಬೇಕು. ಶಿಕ್ಷಣವೇ ಜೀವನದಲ್ಲಿ ಂುಶಸ್ಸಿಗೆ ಪ್ರಮುಖ ಅಸವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಇಂದಿನಿಂದಲೇ ಶ್ರಮವಹಿಸಿ ಕಲಿತರೆ ಜೀವನ ಎಂಬ ಪರೀಕ್ಷೆಂುಲ್ಲಿ ಶ್ರಮಪಡುವ ಅನಿವಾಂರ್ುತೆ ಇರುವುದಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದುಕೊಂಡರೆ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣ ನಮ್ಮಲ್ಲಿರುವ ಅಜ್ಞಾನ ಅಳಿಸುವುದರೊಂದಿಗೆ ಬಡತನ, ಶೋಷಣೆ, ಸಾವಾಜಿಕ ಪಿಡುಗುಗಳಿಂದ ಹೊರಬರಲು ಸಹಕಾರಿ ಆಗಿದೆ. ಈ ದೇಶದಲ್ಲಿ ಬಡತನ ಮತ್ತು ಶೋಷಣೆ ಎನ್ನುವ ಎರಡು ಪಿಡುಗುಗಳಿವೆ. ಇವುಗಳನ್ನು ಅನುಭವಸಿದವರಿಗೆ ಅದರ ನೋವು ತಿಳಿದಿರುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸವಾಜದಲ್ಲಿರುವ ಈ ಪಿಡುಗುಗಳನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಕ್ರವರ್ತಿ ಎಸ್. ಶ್ರೀಧರ್, ಕವಯತ್ರಿ ಡಾ.ಎನ್.ಎಸ್. ಅನ್ನಪೂರ್ಣ, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿಶ್ವನಾಥ್, ಯುವರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಪಿ ನವೀನ್ ಕುಮಾರ್, ಶ್ರೀಮತಿ ಕಮಲಮ್ಮ ಜಿ.ಎ. ಶಿವಲಿಂಗಯ್ಯ ಧಾರ್ಮಿಕ ಸಂಸ್ಥೆ ದತ್ತಿ ಸಂಸ್ಥೆ ಅಧ್ಯಕ್ಷ ಜಿ.ಎ. ಶಿವಲಿಂಗಯ್ಯ, ಮಹಾರಾಜ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ಎಂ. ಮಲ್ಲಣ್ಣ ಹಾಗೂ ಇತರರು ಇದ್ದರು.