ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪಿ.ಕೆ.ರಾಮಕೃಷ್ಣ, ರಾಜೇಗೌಡ, ಕೆ.ರಮೇಶ್, ಎಂ.ಬಿ.ಸಂಪತ್, ಬಿ.ಎಸ್.ಸತೀಶ್ ಆರಾಧ್ಯ, ಟಿ.ಎಸ್.ಹರೀಶ್, ನಂಜುಂಡಸ್ವಾಮಿ ಇದ್ದರು. 
ಮೈಸೂರು

ಜೀವನ ರೂಪಿಸುವಲ್ಲಿ ಶಿಕ್ಷಣ ಪಾತ್ರ ಪ್ರಮುಖ

ಲಲಾಟಾಕ್ಷ ಎಸ್
ಪಿರಿಯಾಪಟ್ಟಣ: ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳ ನಿರ್ದಿಷ್ಟ ಗುರಿ ತಲುಪಲು ಸಹಕಾರಿಯಾಗಲಿವೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಪ್ರಾಂತಪಾಲ ಪಿ.ಕೆ.ರಾಮಕೃಷ್ಣ ತಿಳಿಸಿದರು.
ರೋಟರಿ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಗೌರಿಶಂಕರ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು. ನಮ್ಮ ಜೀವನ ರೂಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುತ್ತಿದೆ ಎಂದರು.
ರೋಟರಿ ಸಂಸ್ಥೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜದ ಬದಲಾವಣೆಗೆ ತನ್ನ ಕೈಲಾದ ಸಹಾಯ ನೀಡುತ್ತಿದೆ. ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಎಂ.ಬಿ.ಸಂಪತ್ ತಮ್ಮ ಸಹೋದರರಾದ ಚಂದ್ರಶೇಖರ್ ಮತ್ತು ವೀರಭದ್ರಪ್ಪ ಅವರ ಸಹಕಾರದೊಂದಿಗೆ ಶ್ರೀ ಗೌರಿಶಂಕರ ಚಾರಿಟಬಲ್ ಟ್ರಸ್ಟ್ ವತಿಯಿಂದ 10 ವರ್ಷಗಳಿಂದ ಸರ್ಕಾರಿ ಹಾಗೂ ಖಾಸಗಿ ಪ್ರಥಮ ದರ್ಜೆ ಕಾಲೇಜಿನ 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಗೌರಿಶಂಕರ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಚಂದ್ರಶೇಖರ್ ಮಾತನಾಡಿ, ನಾವು ಶಿಕ್ಷಣ ಕಲಿಯುವ ಸಂದರ್ಭ ಎದುರಿಸಿದ ಸಮಸ್ಯೆಗಳನ್ನು ಮನಗಂಡು ನಮ್ಮ ಸಹೋದರರು ಹಾಗೂ ಕುಟುಂಬಸ್ಥರ ನೇತೃತ್ವ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದರು.
ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲ ರಾಜೇಗೌಡ, ವಲಯ ಸೇನಾನಿ ಕೆ.ರಮೇಶ್, ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಅಧ್ಯಕ್ಷ ಎಂ.ಬಿ.ಸಂಪತ್, ಕಾರ್ಯದರ್ಶಿ ಬಿ.ಎಸ್.ಸತೀಶ್ ಆರಾಧ್ಯ, ನಿಯೋಜಿತ ಅಧ್ಯಕ್ಷ ಟಿ.ಎಸ್.ಹರೀಶ್, ನಿಯೋಜಿತ ಕಾರ್ಯದರ್ಶಿ ಕೆ.ಡಿ.ಸಂದೀಪ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ, ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಸುಧಾಕರ್, ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಪದಾಧಿಕಾರಿಗಳಾದ ಜೆ.ಎಸ್.ನಾಗರಾಜ್, ಸಿ.ಎನ್.ವಿಜಯ್, ಬಿ.ಆರ್.ಗಣೇಶ್, ಜೆ.ಎಸ್.ಶ್ರೀನಿವಾಸ್, ಬಿ.ಎಸ್.ಪ್ರಸನ್ನ ಕುಮಾರ್, ಡಿ.ಆರ್.ಧನಂಜಯ್, ಬಿ.ವಿ.ಅನಿತಾ, ಪ್ರೀತಿ ಅರಸ್, ಎಚ್.ಆರ್.ರಮ್ಯಾ, ಕೆ.ವಿ.ಶಿಲ್ಪಾ, ಡಿ.ರಮೇಶ್ ಮತ್ತಿತರಿದ್ದರು.