ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಹಾಗೂ ಮೈಸೂರು ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಕೆ.ಆರ್.ನಗರದ ಬಿ.ಎಸ್.ಮಾದಪ್ಪ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಡಿ.ಜಿ.ವಿನುತಾಳನ್ನು ಮೈಸೂರು ಜಿಲ್ಲಾ ಶಿಕ್ಷಣ ಇಲಾಖೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉದಯ್ ಕುಮಾರ್ ಸನ್ಮಾನಿಸಿದರು. ಆರ್.ಕೃಷ್ಣಪ್ಪ, ವೆಂಕಟೇಶ್, ಸ್ವಾಮಿಗೌಡ, ಕುಮಾರಸ್ವಾಮಿ, ನಿರಂಜನ್, ಶಿವಪ್ರಸಾದ್, ಕೆ.ಆರ್.ಗಣೇಶ್ ಪ್ರಸಾದ್, ನುತಾ ಇತರರು ಇದ್ದರು. 
ಮೈಸೂರು

ವಿದ್ಯಾರ್ಥಿನಿ ಡಿ.ಜಿ.ವಿನುತಾಗೆ ಸನ್ಮಾನ

ಕೆ.ಆರ್ .ನಗರ: ಪಟ್ಟಣದ ಬಿ.ಎಸ್.ಮಾದಪ್ಪ ಶಾಲೆಯ ವಿದ್ಯಾರ್ಥಿನಿ ಪ್ರಸ್ತುತ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‌್ಯಾಂಕ್ ಹಾಗೂ ಮೈಸೂರು ಜಿಲ್ಲೆಗೆ ಎರಡನೇ ರ‌್ಯಾಂಕ್(625ಕ್ಕೆ 623 ಅಂಕ) ಪಡೆಸಿರುವುದು ಕೆ.ಆರ್.ನಗರ ಕ್ಷೇತ್ರವೇ ಹೆಮ್ಮೆ ಪಡುವ ವಿಷಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಉದಯ್ ಕುಮಾರ್ ಹೇಳಿದರು.
ಪಟ್ಟಣದ ಬಿ.ಎಸ್.ಮಾದಪ್ಪ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ 2026 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಡಿ.ಜಿ.ವಿನುತಾಗೆ ಮೈಸೂರು ಜಿಲ್ಲಾ ಶಿಕ್ಷಣ ಇಲಾಖೆಯಿಂದ ಸನ್ಮಾನಿಸಿ ಮಾತನಾಡಿದರು.
ಬಿ.ಎಸ್.ಮಾದಪ್ಪ ವಿದ್ಯಾ ಸಂಸ್ಥೆಯು ಬಿಇಒ ಆರ್.ಕೃಷ್ಣಪ್ಪ ಹಾಗೂ ಸಹೋದ್ಯೋಗಿಗಳ ಮಾರ್ಗದರ್ಶನದಲ್ಲಿ ಉತ್ತಮವಾದ ಫಲಿತಾಂಶವನ್ನು ನೀಡುತ್ತಿದ್ದು, ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕ ಹಾಗೂ ಸಹಶಿಕ್ಷಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ, 2026 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಡಿ.ಜಿ. ವಿನುತಾ ಉತ್ತಮ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ಉತ್ತಮವಾಗಿರಲಿ ಎಂದು ಹಾರೈಸಿದರು.
ಬಿಆರ್‌ಸಿ.ವೆಂಕಟೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ಡಿಪಿಇಓ ಕುಮಾರಸ್ವಾಮಿ, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ನಿರಂಜನ್, ಕಾರ್ಯದರ್ಶಿ ಶಿವಪ್ರಸಾದ್, ಮುಖ್ಯಶಿಕ್ಷಕ ಕೆ.ಆರ್.ಗಣೇಶ್ ಪ್ರಸಾದ್, ಶಿಕ್ಷಕರಾದ ವಿನುತಾ, ರುಕ್ಸಾನ ಬಾನು, ಕೃತಿಕಾ, ರಜನಿ, ಶ್ವೇತಾ, ಸುಷ್ಮಾ, ವಾಣಿಶ್ರೀ, ಜೀವಿತಾ, ಶಶಿಕಿರಣ್, ಎಚ್.ಆರ್.ಶ್ರುತಿ, ಅಂಬಿಕಾ, ಶಾಂತಮ್ಮ ಇತರರು ಹಾಜರಿದ್ದರು.