ರಾಜ್ಯ ಮಟ್ಟದ ಎನ್‌ಆರ್‌ಜೆ ಜೂನಿಯರ್ ‘ವಾಟರ್ ಪೋಲೊ ಚಾಂಪಿಯನ್‌ಷಿಪ್’ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡ
- ಕರ್ನಾಟಕ ರಾಜ್ಯ ಈಜು ಸಂಸ್ಥೆ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಆಯೋಜನೆ
- ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡ 19-13 ಗೋಲುಗಳಿಂದ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡದ ವಿರುದ್ಧ ಜಯ ಸಾಧಿಸಿತು
- ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡ 14-11 ಗೋಲುಗಳಿಂದ ಸ್ಟಾರ್ ಅಕ್ವಾಟಿಕ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕೇರಿತು.
ಮೈಸೂರು: ಉತ್ತಮ ಪ್ರದರ್ಶನ ನೀಡಿದ ಬೆಂಗಳೂರಿನ ‘ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್’ ಹಾಗೂ ‘ಬಸವನಗುಡಿ ಅಕ್ವಾಟಿಕ್ ಸೆಂಟರ್’ ತಂಡಗಳು ಕ್ರಮವಾಗಿ ರಾಜ್ಯ ಮಟ್ಟದ ಎನ್‌ಆರ್‌ಜೆ ಜೂನಿಯರ್ ‘ವಾಟರ್ ಪೋಲೊ ಚಾಂಪಿಯನ್‌ಷಿಪ್’ ಸ್ಪರ್ಧೆಯ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಕರ್ನಾಟಕ ರಾಜ್ಯ ಈಜು ಸಂಸ್ಥೆ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಭಾನುವಾರ ಆಯೋಜಿಸಿದ್ದ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡ 14-11 ಗೋಲುಗಳಿಂದ ಸ್ಟಾರ್ ಅಕ್ವಾಟಿಕ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕೇರಿತು.
ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡ 19-13 ಗೋಲುಗಳಿಂದ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡದ ವಿರುದ್ಧ ಜಯ ಸಾಧಿಸಿತು. ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕೆ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡ 23-10 ಗೋಲುಗಳಿಂದ ಸ್ವಿಮ್‌ಲೈಫ್ ತಂಡವನ್ನು ಸೋಲಿಸಿತು. ಬಾಲಕಿಯರ ವಿಭಾಗದಲ್ಲಿ ಸ್ವಿಮ್‌ಲೈಫ್ ತಂಡ 14-2 ಗೋಲುಗಳಿಂದ ಸೀವರ್ಲ್ಡ್ ತಂಡದ ವಿರುದ್ಧ ಜಯ ಪಡೆಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಹಿರಿಯ ಈಜು ತರಬೇತುದಾರ ಎಂ.ಪಿ.ನಾಭಿರಾಜ್, ಹಿರಿಯ ವಾಟರ್ ಪೋಲೊ ಆಟಗಾರ ಸತೀಶ್, ಕರ್ನಾಟಕ ಈಜು ಸಂಸ್ಥೆಯ ಜಂಟಿ ಕಾರ್ಯದರ್ಶಿಬಿ.ರಮ್ಯಾ ಇತರರಿದ್ದರು.