ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ
ಮೈಸೂರು: ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಸಂಜೆ ಸಿನಿ ಪ್ರಶಸ್ತಿ ಸಡಗರ ಮೇಳೈಸಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬರೋಬ್ಬರಿ 6 ವರ್ಷ ಬಳಿಕ ಪುರಸ್ಕಾರ ಪಡೆದ ನಟ-ನಟಿಯರು, ಸಿನಿಮಾದ ವಿವಿಧ ಕ್ಷೇತ್ರದವರು ಹಿರಿ ಹಿರಿ ಹಿಗ್ಗುವ ಮೂಲಕ ಸಂಭ್ರಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರಿಗೂ ಪ್ರಶಸ್ತಿ ನೀಡಿ ಅಭಿನಂದಿಸಿದರು.
2018ರ ಸಾಲಿನ ಚಲನಚಿತ್ರ ಪ್ರಶಸ್ತಿ:
ದಯಾಳ್ ಪದ್ಮನಾಭನ್ ನಿರ್ದೇಶನದ ಡಿ ಪಿಕ್ಚರ್ಸ್ ನಿರ್ಮಾಣದ ‘ಆ ಕರಾಳ ರಾತ್ರಿ’ ಸಿನಿಮಾ ‘ಮೊದಲನೇ ಅತ್ಯುತ್ತಮ ಚಿತ್ರ’, ಕೆ.ಶಿವರುದ್ರಯ್ಯ ನಿರ್ದೇಶನದ ಸುಧಾ ಕ್ರಿಯೇಷನ್ಸ್ ನಿರ್ಮಾಣದ ‘ರಾಮನ ಸವಾರಿ’ ಎರಡನೇ ಅತ್ಯುತ್ತಮ ಚಿತ್ರ, ಡಿ.ಸತ್ಯಪ್ರಕಾಶ್ ನಿರ್ದೇಶನದ ಡಿ.ಎನ್.ಸಿನಿಮಾಸ್ ನಿರ್ಮಾಣದ ‘ಒಂದಲ್ಲಾ ಎರಡಲ್ಲಾ’ ಮೂರನೇ ಅತ್ಯುತ್ತಮ ಚಿತ್ರ, ಟಿ.ಎನ್.ನಾಗೇಶ್ ನಿರ್ದೇಶನದ ಲಕ್ಷ್ಮೀನರಸಿಂಹ ಮೂವಿಸ್ ನಿರ್ಮಾಣದ ‘ಸಂತಕವಿ ಕನಕದಾಸರ ರಾಮಧಾನ್ಯ’ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ, ರಿಷಬ್ ಶೆಟ್ಟಿ ನಿರ್ದೇಶನದ ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದ ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ,
ಬಿ.ಮಂಜುನಾಥ್ ನಿರ್ದೇಶನದ ಚಂದ್ರಿಕಾ ಫಿಲಂಸ್ ನಿರ್ಮಾಣದ ‘ಹೂವು ಬಳ್ಳಿ’ ಅತ್ಯುತ್ತಮ ಮಕ್ಕಳ ಚಿತ್ರ, ಬಸವರಾಜ್ ವಿ.ಹಮ್ಮಿಣಿ ನಿರ್ದೇಶನದ ರಾಜ್ ಹಮ್ಮಿಣಿ ಸಿನಿಮಾಸ್ ನಿರ್ಮಾಣದ ‘ಬೆಳಕಿನ ಕನ್ನಡಿ’ ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರ, ಸುರ್ಯೋದಯ ನಿರ್ದೇಶನದ ಸಂಕ್ರಿ ಮೋಷನ್ ಪಿಕ್ಚಸ್ ನಿರ್ಮಾಣದ ‘ದೇಯಿ ಬೈದೇತಿ’ (ತುಳು) ಚಿತ್ರಕ್ಕೆ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ಭಾಗ್ಯ ದೊರೆಯಿತು. ಈ ಸಿನಿಮಾಗಳ ನಿರ್ಮಾಪಕರು ಕೆಸಿಎನ್ ಗೌಡ ಪ್ರಶಸ್ತಿ ಮತ್ತು ನಿರ್ದೇಶಕರು ಎಚ್‌ಎಲ್‌ಎನ್ ಸಿಂಹ ಪ್ರಶಸ್ತಿ ಮುಡಿಗೇರಿಸಿಕೊಂಡರು.
ರಾಘವೇಂದ್ರ ರಾಜಕುಮಾರ್‌ಗೆ ‘ಅತ್ಯುತ್ತಮ ನಟ’, ಮೇಘನಾ ರಾಜ್ ‘ಅತ್ಯುತ್ತಮ ನಟಿ’, ಬಾಲಾಜಿ ಮನೋಹರ್ ‘ಅತ್ಯುತ್ತಮ ಪೋಷಕ ನಟ’, ವೀಣಾ ಸುಂದರ್ ‘ಅತ್ಯುತ್ತಮ ಪೋಷಕ ನಟಿ’, ಎಸ್.ಹರೀಶ್ ‘ಅತ್ಯುತ್ತಮ ಕಥೆ’, ನಿರ್ದೇಶಕ ಪಿ.ಶೇಷಾದ್ರಿಗೆ ‘ಅತ್ಯುತ್ತಮ ಚಿತ್ರಕಥೆ’, ಶಿರೀಷ್ ಜೋಷಿ ‘ಅತ್ಯುತ್ತಮ ಸಂಭಾಷಣೆ’, ಐ.ನವೀನ್‌ಕುಮಾರ್ ‘ಅತ್ಯುತ್ತಮ ಛಾಯಾಗ್ರಹಣ’, ರವಿ ಬಸ್ರೂರ್ ‘ಅತ್ಯುತ್ತಮ ಸಂಗೀತ ನಿರ್ದೇಶನ’, ಸುರೇಶ್ ಆರ‌್ಮುಗಂ ‘ಅತ್ಯುತ್ತಮ ಸಂಕಲನ’, ಮಾಸ್ಟರ್ ಆ್ವರೆನ್ ‘ಅತ್ಯುತ್ತಮ ಬಾಲ ನಟ’, ಬೇಬಿ ಸಿಂಚನ ‘ಅತ್ಯುತ್ತಮ ಬಾಲ ನಟಿ’, ಜೆ.ಶಿವಕುಮಾರ್ ‘ಅತ್ಯುತ್ತಮ ಕಲಾ ನಿರ್ದೇಶನ’, ಡಾ.ಬರಗೂರು ರಾಮಚಂದ್ರಪ್ಪ ‘ಅತ್ಯುತ್ತಮ ಗೀತ ರಚನೆ’, ಸಿದ್ಧಾರ್ಥ ಬೆಳ್ಮಣ್ಣು ‘ಅತ್ಯುತ್ತಮ ಹಿನ್ನೆಲೆ ಗಾಯಕ’, ಕಲಾವತಿ ದಯಾನಂದ ‘ಅತ್ಯುತ್ತಮ ಹಿನ್ನೆಲೆ ಗಾಯಕಿ, ಎಚ್.ಅನಂತರಾಯಪ್ಪ ಮತ್ತು ವಿ.ಥಾಮಸ್‌ಗೆ ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ ದೊರೆಯಿತು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಚಿತ್ರಕಥೆ ಹಾಗೆಂದರೇನು?’ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಎನ್.ಎಸ್.ಶಂಕರ್ ಅವರಿಗೆ, ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ ವರ್ಣರಂಜಿತ ಬದುಕು ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯು ಡಾ.ಶರಣು ಹುಲ್ಲೂರು ಅವರಿಗೆ ಲಭ್ಯವಾಯಿತು. ಕಿರು ಚಿತ್ರ ವಿಭಾಗದಲ್ಲಿ ವಿ.ಮನೋಜ್ ಕುಮಾರ್ ನಿರ್ಮಾಣ ಮತ್ತು ನಿರ್ದೇಶನದ ಪಡುವಾರಹಳ್ಳಿ ಸಿನಿಮಾಗೆ ‘ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿ’ ಲಭಿಸಿತು.
2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ
ಪಿ.ಶೇಷಾದ್ರಿ ನಿರ್ದೇಶನದ ಮಿತ್ರ ಚಿತ್ರ ಬ್ಯಾನರ್‌ನ ಗಾಂಧೀಜಿ ಬಾಲ್ಯದ ಜೀವನಾಧಾರಿತ ಮೋಹನದಾಸ ಚಿತ್ರ ‘ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡರೆ, ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ಕೃಷ್ಣ ಟಾಕೀಸ್ ನಿರ್ಮಾಣದ ಲವ್ ಮಾಕ್‌ಟೇಲ್ ‘ಎರಡನೇ ಅತ್ಯುತ್ತಮ ಚಿತ್ರ’, ವೈ.ಶ್ರೀನಿವಾಸ್ ನಿರ್ದೇಶನದ ಶ್ರೀ ಪರಮೇಶ್ವರಿ ಆರ್ಟ್ಸ್ ನಿರ್ಮಾಣದ ಅರ್ಘ್ಯಂ ‘ಮೂರನೇ ಅತ್ಯುತ್ತಮ ಚಿತ್ರ’ ಪಡೆದುಕೊಂಡಿತು.
ಇವುಗಳೊಂದಿಗೆ ಡಾ.ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬುಡ್ಡಿದೀಪ ಸಿನಿಮಾ ಹೌಸ್ ನಿರ್ಮಾಣದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾಕ್ಕೆ ‘ವಿಶೇಷ ಸಾಮಾಜಿಕ ಕಾಳಜಿ ಚಿತ್ರ’ ಮತ್ತು ಜೆ.ಅರುಣ್ ನಿರ್ದೇಶನದ ಎಸ್.ಆರ್.ಎಂಟರ್‌ಪ್ರೈಸಸ್ ನಿರ್ಮಾಣದ ‘ಎಲ್ಲಿ ಆಡೋದು ನಾವು ಎಲ್ಲಿ ಆಡೋದು’ ಚಿತ್ರವು ‘ಅತ್ಯುತ್ತಮ ಮಕ್ಕಳ ಚಿತ್ರ’ ಪ್ರಶಸ್ತಿ ಗಿಟ್ಟಿಸಿಕೊಂಡಿತು. ಈ ಸಿನಿಮಾಗಳ ನಿರ್ಮಾಪಕರಿಗೆ ಕೆಸಿಎನ್ ಗೌಡ ಪ್ರಶಸ್ತಿ ಮತ್ತು ನಿರ್ದೇಶಕರಿಗೆ ಎಚ್‌ಎಲ್‌ಎನ್ ಸಿಂಹ ಪ್ರಶಸ್ತಿ ಲಭಿಸಿತು.
ಕಿಚ್ಚ ಸುದೀಪ್ (ಅತ್ಯುತ್ತಮ ನಟ), ಅನುಪಮಾ ಗೌಡ (ಅತ್ಯುತ್ತಮ ನಟಿ), ತಬಲಾ ನಾಣಿ ‘ಅತ್ಯುತ್ತಮ ಪೋಷಕ ನಟ’, ಅನುಷಾ ಕೃಷ್ಣ ‘ಅತ್ಯುತ್ತಮ ಪೋಷಕ ನಟಿ’, ಜಯಂತ್ ಕಾಯ್ಕಿಣಿ ‘ಅತ್ಯುತ್ತಮ ಕಥೆ’, ಡಾರ್ಲಿಂಗ್ ಕೃಷ್ಣ ‘ಅತ್ಯುತ್ತಮ ಚಿತ್ರಕಥೆ’, ಡಾ.ಬರಗೂರು ರಾಮಚಂದ್ರಪ್ಪ ‘ಅತ್ಯುತ್ತಮ ಸಂಭಾಷಣೆ’, ಜಿ.ಎಸ್.ಭಾಸ್ಕರ್ ‘ಅತ್ಯುತ್ತಮ ಛಾಯಾಗ್ರಾಹಕ’, ವಿ.ಹರಿಕೃಷ್ಣ ‘ಅತ್ಯುತ್ತಮ ಸಂಗೀತ ನಿರ್ದೇಶಕ’, ಜಿ.ಬಸವರಾಜು ಅರಸ್ (ಶಿವು) ‘ಅತ್ಯುತ್ತಮ ಸಂಕಲನ’, ಮಾಸ್ಟರ್ ಪ್ರೀತಂ ‘ಅತ್ಯುತ್ತಮ ಬಾಲ ನಟ’, ಬೇಬಿ ವೈಷ್ಣವಿ ಅಡಿಗ ‘ಅತ್ಯುತ್ತಮ ಬಾಲ ನಟಿ’, ಹೊಸ್ಮನೆ ಮೂರ್ತಿ ‘ಅತ್ಯುತ್ತಮ ಕಲಾ ನಿರ್ದೇಶನ’, ರಝಾಕ್ ಪುತ್ತೂರು ‘ಅತ್ಯುತ್ತಮ ಗೀತ ರಚನೆ’, ರಘು ದೀಕ್ಷಿತ್ ‘ಅತ್ಯುತ್ತಮ ಹಿನ್ನೆಲೆ ಗಾಯಕ’, ಡಾ.ಜಯದೇವಿ ಜಂಗಮ ಶೆಟ್ಟಿ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’, ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಮತ್ತು ಆರ್.ಗಂಗಾಧರ್ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿತು.
ಅಂಕಿತ ಪ್ರಕಾಶನದ ಲೇಖಕ ಚ.ಹ.ರಘುನಾಥ ಅವರ ಬೆಳ್ಳಿ ತೊರೆ ಸಿನಿಮಾ ಪ್ರಬಂಧಗಳು ಕೃತಿಗೆ ‘ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ’ ಪಡೆದುಕೊಂಡರೆ, ಶ್ರೀನಾಥ್ ಎಸ್.ಹಡಗಲಿ ನಿರ್ದೇಶನದ ಮನೋಹರ ಎಸ್.ಐಯ್ಯರ್ ನಿರ್ಮಾಣದ ಗುಳೆ ಕಿರುಚಿತ್ರಕ್ಕೆ ‘ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ’ಯನ್ನು ನೀಡಲಾಯಿತು.