ನಗರದ ಹಾರ್ಡಿಂಜ್ ವೃತ್ತದ ಬಳಿ ದೊಡ್ಡ ಕೆರೆ ಮೈದಾನದಲ್ಲಿರುವ ಶ್ರೀಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಶ್ರೀಸಿದ್ಧಲಿಂಗೇಶ್ವರಸ್ವಾಮಿ 23ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು.
ನಗರದ ಹಾರ್ಡಿಂಜ್ ವೃತ್ತದ ಬಳಿ ದೊಡ್ಡ ಕೆರೆ ಮೈದಾನದಲ್ಲಿರುವ ಶ್ರೀಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಶ್ರೀಸಿದ್ಧಲಿಂಗೇಶ್ವರಸ್ವಾಮಿ 23ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು.
ಜೆ.ಪಿ.ನಗರ ಒಂದನೇ ಹಂತದ ಶ್ರೀಸಿದ್ಧಲಿಂಗೇಶ್ವರಸ್ವಾಮಿ ಸಮಿತಿ ಟ್ರಸ್ಟ್, ಶ್ರೀಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಳಿ, ಶ್ರೀಸಿದ್ಧಲಿಂಗೇಶ್ವರಸ್ವಾಮಿ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಂಜಾನೆಯಿಂದಲೇ ನಾನಾ ಧಾರ್ಮಿಕ ಕೈಂಕರ್ಯಗಳು ನಡೆದವು. ಶ್ರೀಸಿದ್ಧಲಿಂಗೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ, ನಂದಿಧ್ವಜ ಹಾಗೂ ಕಲಾತಂಡಗಳ ಮೆರವಣಿಗೆ ಗಮನ ಸೆಳೆದವು.
ಮುಂಜಾನೆಯಿಂದಲೇ ಏಕಾದಶವಾರ, ರುದ್ರಾಭಿಷೇಕ, ರಾಜೋಪಚಾರ, ಪುಷ್ಪಾಲಂಕಾರ, ಹೋಮ, ಹವನಾದಿ ಕಾರ್ಯ, ಮಹಾಮಂಗಳಾರತಿ, ಗಣಪತಿ ಹೋಮ, ಚಂಡಿ ಹೋಮ, ದುರ್ಗ ಹೋಮ, ಸುದರ್ಶನ ಹೋಮ, ಸುಬ್ರಹ್ಮಣ್ಯ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಜಿಲ್ಲೆಯ ಹಾಗೂ ಮೈಸೂರಿನ ವಿವಿಧ ಬಡಾವಣೆಗಳಿಂದ ಆಗಮಿಸಿದ ಭಕ್ತರು ಶ್ರೀ ಸಿದ್ಧಲಿಂಗೇಶ್ವರ ದರ್ಶನ ಪಡೆದು ಭಕ್ತಿ ಭಾವ ಮೆರೆದರು. ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಪವಾಡ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು ವಾತನಾಡಿ, ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ತಮ್ಮ ಧ್ಯಾನದ ಸಂದರ್ಭದಲ್ಲಿ ಕಾಮಧೇನು ಹಾಲೆರೆದು ಹಸಿವು ತಣಿಸಿತು. ಹೀಗೆಯೇ ಮನುಷ್ಯ ಹಸಿವಿನಲ್ಲಿದ್ದಾಗ ಭಗವಂತ ಯಾವುದಾದರು ರೂಪದಲ್ಲಿ ಅನ್ನ ಕೊಡುತ್ತಾನೆ. ಅದರ ಸದುಪಯೋಗ ಪಡೆದುಕೊಂಡ ನಾವು ಸಮಾಜಕ್ಕೆ ಕೊಡುಗೆ ನೀಡದಿದ್ದರೆ ಬದುಕು ಅರ್ಥವೆನಿಸಿಕೊಳ್ಳುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮುದಾಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಇವರ ಮೂಲಕವೇ ಜೆ.ಪಿ.ನಗರದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಿವೇಶನ ದೊರೆತು. ದೇವಸ್ಥಾನ ನಿರ್ಮಾಣದ ಕಾರ್ಯ ಆರಂಭವಾಗಿದೆ. ಹೀಗಾಗಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಪ್ರತಿ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದೇವಸ್ಥಾನ ನಿರ್ಮಾಣದ ಪ್ರಸ್ತಾಪಿಸಿದಾಗ ಹಣ ಕೊಡುವ ಭರವಸೆ ನೀಡುತ್ತಿದ್ದರು. ಆದರೆ, ಈಡೇರಿಸಿರಲಿಲ್ಲ. ಈ ಬಾರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹಣ ಕೊಡುವುದಾಗಿ ವಚನ ನೀಡಿದ್ದಾರೆ. ಈ ಮಾತನ್ನು ಅವರು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ದೇವಸ್ಥಾನ ನಿರ್ಮಾಣದ ಕುರಿತು ಇಂದಿಗೂ ಸಮುದಾಯವರಲ್ಲಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಯಡಿಯೂರಿನಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಸಮುದಾಯವರು ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಬೇಕು ಎಂದು ಹೇಳಿದರು.
ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಧನ್ಯ ಕುಮಾರಿ ಮಾತನಾಡಿ, ದೇವಸ್ಥಾನದ ಉದ್ಘಾಟನೆಗೆ ಸಮುದಾಂು ಪ್ರತಿಂೊಬ್ಬರೂ ಕೈ ಜೋಡಿಸಬೇಕು. ಸತ್ಕಾಂರ್ುದ ಕೆಲಸಕ್ಕೆ ಸಮುದಾಂು ಮುಂದೆ ಬರಬೇಕು ಎಂದರು.
ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸಮಿತಿ ಟ್ರಸ್ಟ್‌ನ ಗೌರವಾಧ್ಯಕ್ಷ ಎಸ್.ಸಿ.ಅಶೋಕ್, ಟ್ರಸ್ಟ್‌ನ ಅಧ್ಯಕ್ಷ ವೀರೇಶ್, ಪ್ರಧಾನ ಕಾರ್ಯದರ್ಶಿ ಆರ್.ಸ್ವಾಮಿ, ನಗರಪಾಲಿಕೆ ವಾಜಿ ಸದಸ್ಯ ಬಿ.ವಿ.ಮಂಜುನಾಥ, ನಂದೀಶ್, ಟ್ರಸ್ಟ್‌ನ ಕಲ್ಯಾಣ್, ಸುನೀಲ್, ಕೈಲಾಸ್, ಪ್ರದೀಪ್, ದೀಪಕ್, ರವಿ, ರಾಜೇಶ್, ಮಂಜುನಾಥ್, ಚಂದನ್, ಪ್ರವೀಣ್, ಪ್ರಮೋದ್ ಇತರರಿದ್ದರು.