ಸಿದ್ಧಗಂಗಾ ಶ್ರೀ ಜಯಂತಿ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದವರಿಗೆ ಶ್ರೀಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂಬಳೆ ಶಿವಣ್ಣ, ಡಾ.ಜಯಪ್ಪ ಹೊನ್ನಾಳಿ, ಡಾ.ಕೆ.ರಘುರಾಂ ವಾಜಪೇಯಿ, ಎನ್.ಎಂ. ನವೀನ್‌ಕುಮಾರ್, ಡಾ.ಎಂ.ಜಿ.ಆರ್. ಅರಸ್, ಶೋಭಾರಾಣಿ ಜೈಪ್ರಕಾಶ್ ಇತರರಿದ್ದರು.
- ಸಿದ್ದಗಂಗಾ ಶ್ರೀಗಳು ದಿವ್ಯ ದಾರ್ಶನಿಕರೂ, ಶ್ರೇಷ್ಠ ಶಿಕ್ಷಣ ತಜ್ಞರೂ ಮತ್ತು ಮಹಾ ಮಾನವತಾವಾದಿಗಳೂ ಆಗಿದ್ದರು
- ಉಚಿತ ಶಿಕ್ಷಣ ನೀಡುವ ಮೂಲಕ, ಅವರಿಗೆ ಬೆಳಕಿನ ಭವಿಷ್ಯ ಒದಗಿಸಿದ ಕಾಯಕ ಯೋಗಿ,
ಮೈಸೂರು:ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಏರ್ಪಡಿಸಿದ್ದ ಶ್ರೀಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತಿ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದವರಿಗೆ ಶ್ರೀಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತ್ಯ ಕ್ಷೇತ್ರದ ಡಾ.ಕೆ.ಲೀಲಾ ಪ್ರಕಾಶ್, ವೈದ್ಯಕೀಯ ಕ್ಷೇತ್ರದ ಎಸ್.ಗಿರೀಶ್, ಶಿಕ್ಷಣ ಕ್ಷೇತ್ರದ ಎಂ.ಸಿ.ಮಂಜುಳಾ, ಕಲಾ ಮತ್ತು ಧಾರ್ಮಿಕ ಕ್ಷೇತ್ರದ ಸುಮಾರಾವ್, ಸಾರ್ವಜನಿಕ ಸೇವಾಕ್ಷೇತ್ರದ ಗೋಪಾಲ್, ಸಮಾಜ ಸೇವಾಕ್ಷೇತ್ರದ ತನುಜ ಮಹೇಶ್, ಗೋಲ್ಡನ್ ಟಿ.ಸುರೇಶ್ ಹಾಗೂ ಮಾಧ್ಯಮ ಕ್ಷೇತ್ರದ ಲೋಕೇಶ್ ಹಾಲಹಳ್ಳಿ ಸೇರಿದಂತೆ ಇತರರಿಗೆ ಶ್ರೀಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ತ್ರಿವಿಧ ದಾಸೋಹಿ ಅಷ್ಟೇ ಅಲ್ಲ, ದಿವ್ಯ ದಾರ್ಶನಿಕರೂ, ಶ್ರೇಷ್ಠ ಶಿಕ್ಷಣ ತಜ್ಞರೂ ಮತ್ತು ಮಹಾ ಮಾನವತಾವಾದಿಗಳೂ ಆಗಿದ್ದರು ಎಂದರು.
ಉಚಿತ ಶಿಕ್ಷಣ ನೀಡುವ ಮೂಲಕ, ಅವರಿಗೆ ಬೆಳಕಿನ ಭವಿಷ್ಯ ಒದಗಿಸಿದ ಕಾಯಕ ಯೋಗಿ, ಬದಲಿಗೆ ಏನನ್ನೂ ಬಯಸದ ನಿಷ್ಕಾಮ ಶಿವಯೋಗಿ, ಇಂಥವರು ಯುಗಕ್ಕೊಬ್ಬರು, ಎಲ್ಲರನ್ನೂ ತನ್ನವರೇ ಎಂದುಕೊಂಡ ಇವರೊಬ್ಬ ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.
ಹಿರಿಯ ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ ಅಧ್ಯಕ್ಷತೆ ವಹಿಸಿದರು. ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‌ಕುಮಾರ್, ಅರಸು ಜಾಗೃತಿ ಅಕಾಡೆಮಿಯ ಗೌರವ ಕಾರ್ಯದರ್ಶಿ, ಹಿರಿಯ ಸಾಹಿತಿ ಡಾ.ಎಂ.ಜಿ.ಆರ್. ಅರಸ್, ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಇತರರು ಇದ್ದರು.