ವಿವಿಧ ಕ್ಷೇತ್ರದ ಸಾಧಕರಾದ ಎಸ್. ಬಸವರಾಜು, ಎಂ.ಬಿ. ಮಂಜೇಗೌಡ, ಎನ್.ಧ್ರುವರಾಜ್, ಡಾ. ಕೃಷ್ಣ ವೆಂಕಟಸ್ವಾಮಿ, ಪಾರ್ವತಿ ರಾಮಕೃಷ್ಣ , ಡಾ. ಅಜಯ್ ಕುಮಾರ್ ಜೈನ್, ಎ.ದೇವರಾಜ್, ಆರ್. ಮಂಜುನಾಥ್, ರಶ್ಮಿ ಕಾವೇರಮ್ಮ ಅವರಿಗೆ ಭಾನುವಾರ ಕರ್ನಾಟಕ ಸೇನಾ ಪಡೆ ವತಿಯಿಂದ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿ.ಎನ್. ಮಂಜೇಗೌಡ, ಎಚ್.ವಿ. ರಾಜೀವ್, ಡಾ. ರಘುರಾಂ ಕೆ ವಾಜಪೇಯಿ, ಚಾ.ರಂ. ಶ್ರೀನಿವಾಸ ಗೌಡ, ತೇಜೇಶ್ ಲೋಕೇಶ್ ಗೌಡ ಹಾಗೂ ಇತರರು ಇದ್ದರು.  
ಮೈಸೂರು

ಕರ್ನಾಟಕ ಸೇನಾ ಪಡೆಯಿಂದ ಮೈಸೂರಿನಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಶ್ರೀ ಶಂಕರ ಮಠದಲ್ಲಿ ಭಾನುವಾರ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರಾಚಾರ್ಯರು ದೈವಾಂಶ ಸಂಭೂತರು. ಹಿಂದೂ ಧರ್ಮವನ್ನು ಜಗತ್ತಿನ ಉದ್ದಗಲಕ್ಕೂ ವಿಸ್ತರಿಸಿದರು. ಅತೀ ಚಿಕ್ಕ ವಯಸ್ಸಿನಲ್ಲೇ ದೇಶ ಪರ್ಯಟನೆ ಮಾಡಿದರು ಎಂದು ಹೇಳಿದರು.
ಈ ಸಂದರ್ಭ ಎಸ್. ಬಸವರಾಜು (ಸಮಾಜಸೇವೆ ಕ್ಷೇತ್ರ), ಎಂ.ಬಿ. ಮಂಜೇಗೌಡ (ಸಹಕಾರ), ಎನ್.ಧ್ರುವರಾಜ್ (ರಾಜಕೀಯ), ಡಾ. ಕೃಷ್ಣ ವೆಂಕಟಸ್ವಾಮಿ (ಉದ್ಯಮ), ಪಾರ್ವತಿ ರಾಮಕೃಷ್ಣ (ವಾಸ್ತುಶಿಲ್ಪ), ಡಾ. ಅಜಯ್ ಕುಮಾರ್ ಜೈನ್ (ವೈದ್ಯಕೀಯ), ಎ.ದೇವರಾಜ್ (ಶಿಲ್ಪಕಲೆ), ಆರ್. ಮಂಜುನಾಥ್ (ಕೈಗಾರಿಕೆ), ರಶ್ಮಿ ಕಾವೇರಮ್ಮ (ಶಿಕ್ಷಣ) ಅವರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ, ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹಾಗೂ ಇತರರು ಇದ್ದರು.