ತಿ.ನರಸೀಪುರ ಪಟ್ಟಣದ ಬೈರಾಪುರದಲ್ಲಿ ಶನಿವಾರ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಜಯಲಕ್ಷ್ಮೀ, ಗುಂಡಶೆಟ್ಟಿ, ಸಿದ್ದರಾಜು, ಕೆಂಪ, ಶಂಭುಶೆಟ್ಟಿ, ಶಿವಣ್ಣ ಇದ್ದರು. 
ಮೈಸೂರು

ಬೈರಾಪುರದಲ್ಲಿ ಮಾಚಿದೇವರ ಜಯಂತ್ಯುತ್ಸವ

ತಿ.ನರಸೀಪುರ: ಪಟ್ಟಣದ ಬೈರಾಪುರದಲ್ಲಿ ಮಡಿವಾಳ ಸಮಾಜದ ವತಿಯಿಂದ ಶನಿವಾರ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.
ಮಾಚಿದೇವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ಬಗರ್ ಹುಕುಂ ಸಮಿತಿ ಸದಸ್ಯೆ ಜಯಲಕ್ಷ್ಮೀ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದ ಶಿವಶರಣ ಮಾಚಿದೇವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಸಮುದಾಯದ ಮುಖಂಡರಾದ ಗುಂಡಶೆಟ್ಟಿ, ಸಿದ್ದರಾಜು, ಕೆಂಪ, ಶಂಭುಶೆಟ್ಟಿ, ಶಿವಣ್ಣ, ಬಸವಯ್ಯ, ಸ್ವಾಮಿ, ಜಿ.ಮಹಾದೇವ, ಮಹದೇವಣ್ಣ, ಮಹಾದೇವ, ಮರಿಸ್ವಾಮಿ, ಆಕಾಶ್, ನವೀನ್, ಕುಮಾರ್, ಮಧು, ಪ್ರಕಾಶ್, ಮಂಜುನಾಥ್, ಗುರುಪ್ರಸಾದ್, ಆನಂದಮೂರ್ತಿ, ಮಂಜುನಾಥ್, ರಾಜು, ಶ್ರುತಿ, ನಾಗರತ್ನಮ್ಮ ಇದ್ದರು.