ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವರದರಾಜಸ್ವಾಮಿ 14ನೇ ವರ್ಷದ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. 
ಮೈಸೂರು

ಶ್ರೀಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆ

ಎಚ್.ಡಿ.ಕೋಟೆ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವರದರಾಜಸ್ವಾಮಿ 14ನೇ ವರ್ಷದ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀದೇವಿ, ಭೂದೇವಿ, ಮತ್ತು ಮಹಾಲಕ್ಷ್ಮೀ ಸಮೇತ ಶ್ರೀ ವರದರಾಜಸ್ವಾಮಿ ಉತ್ಸವ ಮೂರ್ತಿಗಳನ್ನು ಮುಂಜಾನೆ 9.15 ರಿಂದ, 9.45ರೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಈ ವೇಳೆ ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ರಥ ಮಂಗಳವಾದ್ಯ, ನಗಾರಿ, ದಾಸಯ್ಯನ ಕುಣಿತದ ಮೂಲಕ ದೇವಾಲಯದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥ ನಂತರ ಸ್ವಸ್ಥಾನ ತಲುಪಿತು. ದಾರಿಯುದ್ದಕ್ಕೂ ಹರಕೆ ಹೊತ್ತ ಭಕ್ತರು ರಥಕ್ಕೆ ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಇದೇ ವೇಳೆ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ನಂತರ ದೇವಾಲಯದ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಬ್ರಹ್ಮ ರಥೋತ್ಸವ ಅಂಗವಾಗಿ ಏ.19 ರಿಂದ ಪ್ರತಿದಿನ ವಿವಿಧ ಸಮಾಜಗಳಿಂದ ಶೇಷವಾಹನ, ಸಮರ ಭೂಪಾಲ, ಸೂರ್ಯ ಮಂಡಲ, ಚಂದ್ರಮಂಡಲ, ಪುಷ್ಪ ಮಂಟಪಾರೋಹಣ, ಗರುಡ ವಾಹನ, ಆನೆ ವಸಂತೋತ್ಸವಗಳ ಮೂಲಕ ವರದರಾಜಸ್ವಾಮಿ ಯವರ ಉತ್ಸವ ನಡೆಸಲಾಯಿತು.
ದೇವಾಲಯ ಸಮಿತಿಯ ಬಿ.ಎಸ್. ಪಾರ್ಥಸಾರಥಿ, ತಿರುಮಲ ಆಚಾರ್, ದೇವರಾಜ್, ವರದರಾಜ್, ವೆಂಕಟೇಶ್ ಪ್ರಸಾದ್, ಡೈರಿ ಶ್ರೀಕಾಂತ್, ಜಯಂತ್, ಪೂರ್ಣೇಶ್, ಕನ್ನಡ ಪ್ರಮೋದ್, ಧಾರ್ಮಿಕ ಆಚರಣೆ ಸಮಿತಿ ಅಧ್ಯಕ್ಷ ರಾಜ ನಾಯಕ, ಚಾಕಳ್ಳಿ ಕೃಷ್ಣ, ಸಂತೋಷ್,, ಆನಂದ್, ರಂಗಸ್ವಾಮಿ, ಅನಿಲ್, ರುದ್ರೇಗೌಡ, ಉದಯಕುಮಾರ್, ಮುಖಂಡರಾದ ಅಶೋಕ ಅನಿಲ್ ಚಿಕ್ಕಮಾದು ಅವರ ತಾಯಿ ನಾಗಮ್ಮ, ಸಿ.ಎನ್.ನಾಗಣ್ಣ ಬ್ಯಾಂಕ್ ವೀರಪ್ಪ, ವೈಟಿ ಮಹೇಶ್, ಎಚ್.ಸಿ. ಮಂಜುನಾಥ್, ಕೆಂಡಗಣ್ಣ, ರೂಪೇಶ್, ಚೆಲುವನಾಯಕ, ನಟರಾಜು, ಸುಧಾಕರ್, ಫಣೀಂದ್ರ, ಸಂತೋಷ್, ಪ್ರಶಾಂತ್, ಶ್ರೀನಿವಾಸ್, ಚಂದ್ರು, ರವಿ, ಜವರನಾಯಕ, ಪ್ರಕಾಶ್, ಅರ್ಚಕರಾದ ವಿನಯ್ ವಾದ್ಯರ್, ಶ್ರೀಧರಮೂರ್ತಿ, ಶ್ರೀನಿಧಿ, ಕೃಷ್ಣ, ಸೋಮನಾಯಕ ಇತರರಿದ್ದರು.
ರಥೋತ್ಸವದ ಅಂಗವಾಗಿ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪುರಸಭೆ ಹಾಗೂ ಸೆಸ್ಕ್ ವತಿಯಿಂದ ರಥೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಯಿತು.