Bramotsava 
ಮೈಸೂರು

ಫೆ.3ರಂದು ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮೋತ್ಸವ

ಕೊಳ್ಳೇಗಾಲ: ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮೋತ್ಸವ ಫೆ.3 ರಂದು ಪಟ್ಟಣದ ನಾರಾಯಣಸ್ವಾಮಿ ಗುಡಿ ಬೀದಿಯಲ್ಲಿ ನಡೆಯಲಿದೆ.
ರಥೋತ್ಸವ ಹಿನ್ನೆಲೆಯಲ್ಲಿ ಶ್ರೀ ನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜಾ ಕೈಂಕರ್ಯ ಜ.27ರಿಂದ ಅಭಿಷೇಕ ಅಂಕುರಾರ್ಪಣ ದಿಂದ ಪ್ರಾರಂಭವಾಗಲಿದೆ. ಜ.28ಕ್ಕೆ ಧ್ವಜಾರೋಹಣ, ಭೇರಿತಾಡನ ಯಾಗಶಾಲಾ ಪ್ರವೇಶ, 29ಕ್ಕೆ ಹಂಸವಾಹನ, 30ಕ್ಕೆ ಶೇಷವಾಹನ, 31ಕ್ಕೆ ಶ್ರೀ ಸೌಮ್ಯಲಕ್ಷ್ಮೀ ಕಲ್ಯಾಣೋತ್ಸವ, ಫೆ. 1ರಂದು ಹುಣ್ಣಿಮೆ ಗರುಡೋತ್ಸವ, 2ಕ್ಕೆ ಗಜೇಂದ್ರ ಮೋಕ್ಷ ನಡೆಯಲಿದ್ದು. 3 ರಂದು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ತೇರು ದಿವ್ಯ ರಥೋತ್ಸವ ಜರುಗಲಿದೆ. 4ಕ್ಕೆ ಶಯನೋತ್ಸವ, 5ಕ್ಕೆ ಕಾವೇರಿಯಲ್ಲಿ ತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ ಪೂಜೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.