ಶ್ರೀರಾಮನವಮಿ ಅಂಗವಾಗಿ ಬೆಟ್ಟದಪುರದ ಶ್ರೀ ಕೋದಂಡರಾಮ ಸ್ವಾಮಿ ದೇವಾಲ ಸಮಿತಿವತಿಯಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮನ ಉತ್ಸವವು ಸಡಗರ ಸಂಭ್ರಮದಿಂದ ನಡೆಯಿತು.ನಾಗರಾಜ್, ಭಾರದ್ವಾಜ್ ಕೃಷ್ಣಪ್ರಸಾದ್, ಕೃಷ್ಣ ಇದ್ದರು.  
ಮೈಸೂರು

ಶ್ರೀ ಕೋದಂಡರಾಮ ಸ್ವಾಮಿ ಉತ್ಸವ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ
ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಶ್ರೀ ರಾಮನವಮಿ ಹಬ್ಬದ ಹಿನ್ನೆಲೆ ಸೂರ್ಯ ನಮಸ್ಕಾರ, ನವಗ್ರಹ ಜಪಪೂಜೆ, ಅಭಿಷೇಕ, ಮಹಾಮಂಗಳಾರತಿ ಪೂಜಾ ಜರುಗಿತು.
ದೇಗುಲ ಪೂಜಾ ಕಾರ್ಯಕ್ರಮದ ಬಳಿಕ ಸಂಜೆ ವೇಳೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮನ ಉತ್ಸವವು ಸಡಗರ ಸಂಭ್ರಮದಿಂದ ನಡೆಯಿತು.
ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕಶ್ಯಪ್ ಮಾತನಾಡಿ, ಏ.6ನೇ ತಾರೀಖಿನವರೆಗೆ ದೇವಾಲಯದಲ್ಲಿ ನಿತ್ಯವು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಸಂತೋತ್ಸವ , ವಿಶೇಷ ಪೂಜೆಗಳು ನಡೆಯಲಿವೆ. ಏ. 5 ರಂದು ಶ್ರೀ ರಾಮನ ಪಟ್ಟಾಭಿಷೇಕ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಶರಣ್ ಭಾರದ್ವಾಜ್, ಕೃಷ್ಣಪ್ರಸಾದ್, ಕೃಷ್ಣ, ಮುಖಂಡರಾದ ಗಿರೀಶ್, ಲತಾ, ನಾಗಮಣಿ, ಸತೀಶ್ ಸೇರಿದಂತೆ ಭಕ್ತರು ಇದ್ದರು.