ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀ ಹನುಮಾನ್ ಚಾಲೀಸ ಪಾರಾಯಣ ರಥಯಾತ್ರೆಗೆ ಚಾಲನೆ ನೀಡಲಾಯಿತು. ಟಿ.ಎಸ್.ಶ್ರೀವತ್ಸ, ಅನಿರುದ್ಧ ಆಚಾರ್, ಪ್ರಾಣೇಶ್, ನವೀನ್‌ಕುಮಾರ್, ಡಾ. ಲಕ್ಷ್ಮೀದೇವಿ, ಕೆ.ಆರ್.ಸತ್ಯನಾರಾಯಣ ಇತರರು ಇದ್ದರು.
- ಎಲ್ಲರೂ ಪಾರಾಯಣದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕು
- ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜನೆ
ಮೈಸೂರು:ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀಹನುಮಾನ್ ಚಾಲೀಸ ಪಾರಾಯಣ ರಥಯಾತ್ರೆಗೆ ಚಾಲನೆ ನೀಡಲಾಯಿತು. ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಿಂದ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ ಫೆ.14 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪ್ರಚಾರ ರಥಯಾತ್ರೆ ಕೈಗೊಳ್ಳಲಾಗಿದೆ.
ಕೃಷ್ಣಮೂರ್ತಿಪುರಂ ಶ್ರೀರಾಘವೇಂದ್ರ ಸ್ವಾಮಿ ಮಠದ ಮುಂದೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿ ಮಾತನಾಡಿ, ಶ್ರೀಗಣಪತಿ ಸಚ್ಚಿದಾನಂದ ಆಶ್ರಮವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದೆ. ಫೆ. 14ರಂದು ನಡೆಯುವ ಶ್ರೀ ಹನುಮಾನ್ ಚಾಲೀಸ ಕಾರ್ಯಕ್ರಮ ನಗರದಲ್ಲಿ ನಡೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿ. ಹಾಗಾಗಿ ನಗರದ ನಾಗರಿಕರು ಎಲ್ಲರೂ ಪಾರಾಯಣದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಉತ್ತರಾದಿ ಮಠದ ಅನಿರುದ್ಧ ಆಚಾರ್, ರಾಜ್ಯ ಬಿಜೆಪಿ ಪ್ರಕೋಷ್ಟದ ಸಹ ಸಂಯೋಜಕ ಪ್ರಾಣೇಶ್, ಕಾಂಗ್ರೆಸ್ ಮುಖಂಡ ನವೀನ್‌ಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಪ್ರತಿನಿಧಿ ಡಾ. ಲಕ್ಷ್ಮೀದೇವಿ, ನಗರ ಸಂಚಾಲಕ ಸತ್ಯನಾರಾಯಣ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ರಘುರಾಮ್ ವಾಜಪೇಯಿ, ಟಿ.ಎಸ್. ಅರುಣ್, ಅಜಯ್‌ಶಾಸ್ತ್ರೀ, ವಾಸುದೇವಮೂರ್ತಿ, ಸುಚಿಂದ್ರಾ, ಚಕ್ರಪಾಣಿ ಆಶ್ರಮದ ರಮೇಶ್ ಬಾಬು, ರವಿ, ಸಂತೋಷ್ ಇತರರಿದ್ದರು.