ಕೆ.ಜಿ.ಕೊಪ್ಪಲು-ಜಯನಗರದ ಶ್ರೀ ಆದಿಶಕ್ತಿ ಬಂದಂತಮ್ಮ ಮತ್ತು ಶ್ರೀ ಕಾಳಮ್ಮ ದೇವಾಲಯದ 23ನೇ ವರ್ಷದ ಬ್ರಹ್ಮರಥೋತ್ಸವ ಶನಿವಾರ ಜರುಗಿತು. ಕೊಪ್ಪಲ್ ರಾಜಣ್ಣ, ಪಿ.ಮಹದೇವಪ್ಪ, ಪಿ.ನಾಗೇಂದ್ರ, ಶ್ರೀನಿವಾಸ್, ರಮೇಶ್, ರಾಜು, ಬಾಲು, ದೇವಪ್ಪ, ನಾಗಣ್ಣ ಇತರರು ಇದ್ದರು.
- ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿಯಿಂದ ಚಾಲನೆ
- ವಿವಿಧ ಜಾನಪದ ಕಲಾತಂಡಗಳು, ಅಲಂಕೃತ ಜೋಡೆತ್ತುಗಳು ಮೆರವಣಿಗೆ
ಕೆ.ಜಿ.ಕೊಪ್ಪಲು-ಜಯನಗರದ ಶ್ರೀ ಆದಿಶಕ್ತಿ ಬಂದಂತಮ್ಮ ಮತ್ತು ಶ್ರೀ ಕಾಳಮ್ಮ ದೇವಾಲಯದ 23ನೇ ವರ್ಷದ ಬ್ರಹ್ಮರಥೋತ್ಸವ ಜರುಗಿತು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಆದಿಶಕ್ತಿ ಬಂದಂತಮ್ಮ ಮತ್ತು ಶ್ರೀ ಕಾಳಮ್ಮ ದೇವಸ್ಥಾನ ಸೇವಾ ಸಮಿತಿ, ಶ್ರೀ ಆದಿಶಕ್ತಿ ಶ್ರೀ ಬಂದಂತಮ್ಮ ಮತ್ತು ಶ್ರೀ ಕಾಳಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಬ್ರಹ್ಮರಥೋತ್ಸವದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಬಳಿಕ ಅಲಂಕೃತ ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಜಯಘೋಷಗಳೊಂದಿಗೆ ವಿವಿಧ ರಸ್ತೆಗಳಲ್ಲಿ ರಥ ಸಾಗಿತು. ನಂದಿ ಧ್ವಜ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಬೊಂಬೆ ಕುಣಿತ, ಪಟ್ಟದ ಕುಣಿತ, ಹುಲಿ ವೇಷಧಾರಿ, ವಿವಿಧ ಜಾನಪದ ಕಲಾತಂಡಗಳು, ಅಲಂಕೃತ ಜೋಡೆತ್ತುಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಆದಿಶಕ್ತಿ ಶ್ರೀ ಬಂದಂತಮ್ಮ ಮತ್ತು ಕಾಳಮ್ಮ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಶಾಸಕ ಕೆ.ಹರೀಶ್‌ಗೌಡ, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಎಂ.ಕೆ.ಸೋಮಶೇಖರ್, ಮುಡ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕರ್ನಾಟಕ ಕಾವಲು ಪಡೆ ಸಂಸ್ಥಾಪಕ ಅಧ್ಯಕ್ಷ ಎಂ.ಮೋಹನ್ ಕುಮಾರ್‌ಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಟ್ರಸ್ಟ್ ಅಧ್ಯಕ್ಷ ಕೊಪ್ಪಲ್ ರಾಜಣ್ಣ, ಪದಾಧಿಕಾರಿಗಳಾದ ಪಿ.ಮಹದೇವಪ್ಪ, ಪಿ.ನಾಗೇಂದ್ರ, ಶ್ರೀನಿವಾಸ್, ರಮೇಶ್, ರಾಜು, ಬಾಲು, ದೇವಪ್ಪ, ನಾಗಣ್ಣ, ಚನ್ನೇಗೌಡ, ಬಂದಣ್ಣ, ಚಂಬಣ್ಣ, ಜಗದೀಶ್, ಪೈಲ್ವಾನ್ ಕೃಷ್ಣಪ್ಪ, ಪಿ.ಪಾಪಣ್ಣ, ಆರ್.ಲಿಂಗಪ್ಪ, ಸೈಕಲ್ ಸ್ಟಾಂಡ್ ಸೋಮಣ್ಣ, ಪೈಲ್ವಾನ್ ದೇಸಿಗೌಡ, ಲಿಂಗಪ್ಪ, ಪಾಪಣ್ಣ, ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಟಿ.ಬಸವರಾಜ್, ಉಪಾಧ್ಯಕ್ಷ ಬಿ.ಸೋಮಣ್ಣ, ಕಾರ್ಯದರ್ಶಿ ಲಿಂಗೇಗೌಡ, ಸಹ ಕಾರ್ಯದರ್ಶಿ ಎಚ್.ಈರಣ್ಣ ಇತರರು ಇದ್ದರು.