ಸಾಲಿಗ್ರಾಮ ಡೇರಿಗೆ ಆಯ್ಕೆಯಾದ ಅಧ್ಯಕ್ಷ ಎಸ್.ಆರ್.ಮಹೇಂದ್ರ, ಉಪಾಧ್ಯಕ್ಷ ಮಹೇಶ್ ಅವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ಅಭಿನಂದಿಸಿದರು. ಡೇರಿ ನಿರ್ದೇಶಕರು, ಬೆಂಗಲಿಗರು ಇದ್ದರು.  
ಮೈಸೂರು

ಸಾಲಿಗ್ರಾಮ ಡೇರಿಗೆ ಎಸ್.ಆರ್.ಮಹೇಂದ್ರ ಅಧ್ಯಕ್ಷ

ಸಾಲಿಗ್ರಾಮ: ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಮಹೇಂದ್ರ, ಉಪಾಧ್ಯಕ್ಷರಾಗಿ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಡೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ್ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ರವಿಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾ.ರಾ. ನಂದೀಶ್ ಅಭಿನಂದಿಸಿ ಮಾತನಾಡಿ, ಸಾಲಿಗ್ರಾಮದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಕಾರಣದಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಉತ್ತಮ ಡೇರಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಸಹಕಾರ ನೀಡಿದರು. ಡೇರಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲ ನಿರ್ದೇಶಕರು ಯಾವುದೇ ಜಾತಿ, ಪಕ್ಷ ಭೇದವಿಲ್ಲದೆ ಡೇರಿ ಅಭಿವೃದ್ಧಿಗೆ ಹೆಚ್ಚು ಸಹಕರಿಸಿ ಎಂದು ಸಲಹೆ ನೀಡಿದರು.
ನಂದಿನಿ ಮಾರಾಟ ಮಳಿಗೆಯ ಮಾಲೀಕ ಸಾ.ರಾ.ಸತೀಶ್ ನೂತನ ಆಡಳಿತ ಮಂಡಳಿ ಎಲ್ಲ ಸದಸ್ಯರನ್ನು ಗೌರವಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವಿಎಸ್‌ಎಸ್ ಮಾಜಿ ಅಧ್ಯಕ್ಷ ಸತೀಶ್, ಪಾಪಣ್ಣ, ನಿರ್ದೇಶಕ ಟ್ರ್ಯಾಕ್ಟರ್ ಅನಂತ್, ಪುರುಷೋತ್ತಮ, ಆನಂದ್, ದಡದಲ್ಲಿ ನಟರಾಜ್. ರೇವಣ್ಣ, ಎಸ್.ಕೆ.ಜಯರಾಮ್, ಎಸ್.ಆರ್.ವಸಂತ, ಅಯ್ಯಪ್ಪ, ಗ್ರಾಪಂ ಮಾಜಿ ಸದಸ್ಯ, ಹರೀಶ್, ಗಂಗಾಧರ್, ಎಸ್ ಎಸ್ ಮಂಜೇಗೌಡ, ಸಾ.ರಾ.ಸತೀಶ್, ರಾಮನಾಯಕ, ಡೇರಿ ಕಾರ್ಯದರ್ಶಿ ಎಸ್.ಡಿ.ಚೇತನ್‌ಕುಮಾರ್, ಎಸ್.ಆರ್.ಗೋವಿಂದರಾಜು, ಹಾಲು ಪರೀಕ್ಷಕ ಅನಂತ, ಕೃಷ್ಣ, ರಾಮೇಗೌಡ, ಸಂದೀಪ ಇತರರು ಇದ್ದರು.