ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ಸಿ.ಶ್ರೀನಿವಾಸ್, ಚಂಪಶ್ರೀ, ಕೆ.ಸಿ.ತ್ರಿವೇಣಿ, ನಳಿನಿ, ಜಯಲಕ್ಷ್ಮಮ್ಮ, ಸರೋಜಮ್ಮ ಇತರರು ಇದ್ದರು. 
ಮೈಸೂರು

ಪುರಸಭೆ ನೌಕರರಿಗೆ ಕ್ರೀಡಾಕೂಟ, ಸನ್ಮಾನ

ತಿ.ನರಸೀಪುರ: ಪೌರಸೇವಾ ಮಹಿಳಾ ನೌಕರರಿಗೆ ವಿವಿಧ ಕ್ರೀಡಾಕೂಟ ಆಯೋಜಿಸಿ, ವೇದಿಕೆಯಲ್ಲಿ ಮಹಿಳಾ ಅಧಿಕಾರಿಗಳು, ನೌಕರರು ಹಾಗೂ ಹಿರಿಯ ಪೌರ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸುವ ಮೂಲಕ ವಿಶ್ವ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುರಸಭೆಯಿಂದ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಪೌರಸೇವಾ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ನಿತ್ಯವೂ ದುಡಿಯುತ್ತಿರುವ ಕಮ್ಯುನಿಟಿ ಮೊಬಲೈಸರ್ ಸಿಬ್ಬಂದಿ ಕಾರ್ಯ ಶ್ಲಾಘಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಮಾತನಾಡಿ, ಕುಟುಂಬ ನಿರ್ವಹಣೆ ಜತೆಗೆ ಹೊರಗೆ ದುಡಿಯುವ ಮೂಲಕ ಮಹಿಳೆಯರು ಸಮಾಜದಲ್ಲಿ ಸಬಲತೆ ಸಾಧಿಸುತ್ತಿದ್ದಾರೆ. ತಾಳ್ಮೆ, ವ್ಯವಧಾನ ಪುರುಷರಿಗಿಂತಲೂ ಹೆಚ್ಚು ಇರುವುದರಿಂದಲೇ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಪೌರಸೇವಾ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಪುರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಿ.ಪ್ರಕಾಶ್ ಮಾತನಾಡಿದರು.
ಮಾಜಿ ಅಧ್ಯಕ್ಷ ಎನ್. ಸೋಮು, ಹಿರಿಯ ಆರೋಗ್ಯ ನಿರೀಕ್ಷಕಿ ಚಂಪಾಶ್ರೀ, ಕಂದಾಯ ಅಧಿಕಾರಿ ಕೆ.ಸಿ.ತ್ರಿವೇಣಿ, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಸಮುದಾಯ ಸಂಘಟನಾಧಿಕಾರಿ ನಳಿನಿ, ಜೆಇ ಸಿದ್ದಪ್ಪ, ಲೆಕ್ಕಾಧಿಕಾರಿ ವಿನಯ್, ಪ್ರಥಮ ದರ್ಜೆ ಸಹಾಯಕಿ ಜಯಲಕ್ಷ್ಮಮ್ಮ, ಆಶಾ, ನಂದಿನಿ, ಸರಸ್ವತಿ, ಗೀತಾ, ಜ್ಯೋತಿ, ರಾಮು, ಹರೀಶ್, ಪೌರಕಾರ್ಮಿಕರಾದ ಸರೋಜಮ್ಮ, ಸರೋಜ, ಬಣ್ಣಮ್ಮ, ಶಿವಣ್ಣ, ಸೋಮ, ಮಹದೇವ್ ಸಿಬ್ಬಂದಿ ಇದ್ದರು.