ಸಿಎಆರ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಆಕರ್ಷಕ ಪಥಸಂಚಲನದಲ್ಲಿ ಆಂತರಿಕ ವಿಭಾಗದ ಎಡಿಜಿಪಿ ಎಂ.ಚಂದ್ರಶೇಖರ್ ವಂದನೆ ಸ್ವೀಕರಿಸಿದರು. ಸೀವಾ ಲಾಟ್ಕರ್, ಕೆ.ಎಸ್.ಸುಂದರ್‌ರಾಜ್, ಎ.ವಾರುತಿ ಇದ್ದರು.
- ಆಂತರಿಕ ವಿಭಾಗದ ಎಡಿಜಿಪಿ ಎಂ.ಚಂದ್ರಶೇಖರ್ ಸಲಹೆ
- ಆಕರ್ಷಕ ಪಥಸಂಚಲನ
ಮೈಸೂರು: ಒತ್ತಡ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ಪೊಲೀಸರಿಗೆ ತುಸು ಹೆಚ್ಚೇ ಇರುತ್ತದೆ. ಮನೆಯಲ್ಲಿದ್ದಾಗ ಮಕ್ಕಳು, ಮನೆಯೊಂದಿಗೆ ಗುಣಾತ್ಮಕವಾಗಿ ಕಾಲ ವ್ಯಯಿಸಿ. ಒಮ್ಮೆ ಕಳೆದ ಕ್ಷಣ ಮತ್ತೊಮ್ಮೆ ಬರಲಾರದು ಎಂದು ಆಂತರಿಕ ವಿಭಾಗದ ಎಡಿಜಿಪಿ ಎಂ.ಚಂದ್ರಶೇಖರ್ ತಿಳಿಸಿದರು.
ನಗರ ಪೊಲೀಸ್ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಆಕರ್ಷಕ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ವಾತನಾಡಿದರು.
ಸಾರ್ವಜನಿಕರ ಕೆಲಸ ವಾಡಲು ದೊಡ್ಡ ಹುದ್ದೆಯೇ ಬೇಕಿಲ್ಲ. ಚಿಕ್ಕ ಹುದ್ದೆಯಲ್ಲಿದ್ದರೂ ಇತರರಿಗೆ ಸಹಾಯ ಮಾಡಬಹುದು. ನಾನು ಹಿವಾಚಲ ಪ್ರದೇಶದಲ್ಲಿ ಕೆಲಸ ವಾಡುತ್ತಿದ್ದ ವೇಳೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚರಣ್ ಸಿಂಗ್ ಎಂಬ ಕಾನ್‌ಸ್ಟೆಬಲ್ ಪ್ರತಿಭಟನೆ, ರ‌್ಯಾಲಿ ಲಕ್ಷಾಂತರ ಜನ ಸೇರುವ ಯಾವುದೇ ಸಭೆ, ಸಮಾರಂಭಗಳು ಗಲಾಟೆ-ಗದ್ದಲಗಳಿಲ್ಲದೆ ಶಾಂತ ರೀತಿಯಲ್ಲಿ ನಡೆಯುವಂತೆ ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ವಾಹಿತಿ ನೀಡಿ ನಿರ್ವಹಣೆ ವಾಡುತ್ತಿದ್ದ ಎಂದು ತಿಳಿಸಿದರು.
ಆ ಕಾನ್‌ಸ್ಟೆಬಲ್ ಮುಂದೆ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಹೊಂದಿ ಒಮ್ಮೆ ಸ್ವಯಂ ನಿವೃತ್ತಿ ಪಡೆದುಕೊಂಡರು. ನಿವೃತ್ತಿ ನಂತರ ಚರಣ್‌ಸಿಂಗ್‌ರನ್ನು ಅಂದಿನ ಮುಖ್ಯಮಂತ್ರಿ ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು ಎಂದ ಅವರು, ಒಳ್ಳೆಯ ಕೆಲಸ ವಾಡಿದರೆ ಅದು ಕಡೆಯವರೆಗೂ ಎಲ್ಲರ ಮನದಲ್ಲಿಂುೂ ಉಳಿಯಲಿದೆ ಎಂದು ತಮ್ಮ ಅನುಭವದ ಉದಾಹರಣೆಯನ್ನು ನೀಡಿದರು.
ನಗರ ಪೊಲೀಸ್ ಆಯುಕ್ತೆ ಸೀವಾ ಲಾಟ್ಕರ್, ಡಿಸಿಪಿ ಕೆ.ಎಸ್.ಸುಂದರ್‌ರಾಜ್, ಮೌಂಟೆಡ್ ಪೊಲೀಸ್ ಕವಾಂಡೆಂಟ್ ಎ.ವಾರುತಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕವಾಂುತಿನಲ್ಲಿ ಪಾಲ್ಗೊಂಡಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿ.ಆರ್.ಬಿಂದುಮಣಿ ಅವರು ಕವಾಯತಿನ ಕವಾಂಡರ್ ಜವಾಬ್ದಾರಿಂುನ್ನು ಯಶಸ್ವಿಯಾಗಿ ನಿರ್ವಹಿಸಿದರು.