ಹುಣಸೂರು ನಗರದ ತಾ.ಪಂ. ಸಭಾಂಗಣದಲ್ಲಿ ಸೂರಜ್ ಹೆಗ್ಡೆ ಗೌರವಾರ್ಥ ಪ್ರಗತಿಪರ ಸಂಘಟನೆಗಳ ಸದಸ್ಯರು ನುಡಿನಮನ ಸಲ್ಲಿಸಿದರು. ಹೊಸೂರು ಕುಮಾರ್, ನಿಂಗರಾಜ ಮಲ್ಲಾಡಿ, ಬಲ್ಲೇನಹಳ್ಳೀ ಕೆಂಪರಾಜು ಇತರರಿದ್ದಾರೆ. 
ಮೈಸೂರು

ಸೂರಜ್ ಹೆಗ್ಡೆಗೆ ನುಡಿನಮನ

ರವಿಕುಮಾರ್ ಪಿ. ಕೆ
ಹುಣಸೂರು: ಸೋಮವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಗೌರವಾರ್ಥ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ನುಡಿನಮನ ಸಲ್ಲಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಸೂರಜ್ ಹೆಗ್ಡೆ ಸರಳತೆಯ ಮೂರ್ತರೂಪ ಆಗಿದ್ದರು. ತಾತ ದೇವರಾಜ ಅರಸು ಅವರಲ್ಲಿದ್ದ ಸಾಮಾಜಿಕ ಬದ್ಧತೆ ಅವರಲ್ಲಿಯೂ ಇತ್ತು. ಆದರೆ ಯಾವುದೇ ರಾಜಕೀಯ ಪಕ್ಷಗಳು ಅವರಿಗೆ ಸೂಕ್ತ ಅವಕಾಶ ನೀಡದೆ ಇದ್ದದ್ದು ನೋವಿನ ಸಂಗತಿ ಎಂದು ವಿಷಾದಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಸೂರಜ್ ಹೆಗ್ಡೆ ಒಡನಾಡಿ ವಿನೋಬಾ ಕಾಲನಿ ಗಣೇಶ್ ನುಡಿನಮನ ಸಲ್ಲಿಸಿದರು. ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ನಾಗನಹಳ್ಳಿ ಮಹದೇವ, ಅಬ್ದುಲ್ ಮಾಲೀಕ್, ರಾಜು ಚಿಕ್ಕಹುಣಸೂರು, ಸಿದ್ದರಾಜು ಅತ್ತಿಕುಪ್ಪೆ, ಪ್ರಕಾಶ್ ಎಂ. ಆರ್ ಹೊಸಹಳ್ಳಿ, ನಾಗರಾಜೇಗೌಡ, ರಾಜ್ಯ ರೈತ ಸಂಘದ ಕಿರಿಜಾಜಿ ಧನಂಜಯ, ಮಾದಯ್ಯ, ಬಸವರಾಜೇಗೌಡ, ಸೋಮಶೇಖರ್, ಮಾದೇಗೌಡ, ಅಂಬೇಡ್ಕರ್ ನಗರದ ದಾಸಪ್ಪ, ಶೋಭಮ್ಮ ಮುಂತಾದವರು ಹಾಜರಿದ್ದರು.