- ಮಾರ್ಚ್ 30 ರಿಂದ ನಾಲ್ಕು ದಿನ ಸಂಚಾರ
- ಪ್ರಯಾಣಿಕರ ಸೌಲಭ್ಯಕ್ಕಾಗಿ ಹಾಗೂ ದೊಡ್ಡಜಾತ್ರೆ, ಪಂಚ ಮಹಾರಥೋತ್ಸವದ ಸಲುವಾಗಿ ವಿಶೇಷ ರೈಲು ಸೇವೆ
ಮೈಸೂರು: ಪ್ರಯಾಣಿಕರ ಸೌಲಭ್ಯಕ್ಕಾಗಿ ಹಾಗೂ ದೊಡ್ಡಜಾತ್ರೆ, ಪಂಚ ಮಹಾರಥೋತ್ಸವದ ಸಲುವಾಗಿ ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸಲು, ಮೈಸೂರು ಮತ್ತು ನಂಜನಗೂಡು ನಡುವೆ ಮಾ.30ರಿಂದ ಏಪ್ರಿಲ್ 3ರವರೆಗೆ 5 ಟ್ರಿಪ್‌ಗಳ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ.
ಮೈಸೂರು-ನಂಜನಗೂಡು ಟೌನ್ ಕಾಯ್ದಿರಿಸದ ಎಕ್ಸ್‌ಪ್ರೆಸ್(06225) ವಿಶೇಷ ಮೈಸೂರಿನಿಂದ ಮಧ್ಯಾಹ್ನ 1ಗಂಟೆಗೆ ಹೊರಟು, ನಂಜನಗೂಡಿಗೆ 2 ಗಂಟೆಗೆ ತಲುಪಲಿದೆ. ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು ಚಾಮರಾಜಪುರಂ 1.07/01.08 ಗಂಟೆ, ಅಶೋಕಪುರಂ 01.15/01.16 ಗಂಟೆ, ಕಡಕೊಳ 01.29/13.30 ಗಂಟೆ, ತಾಂಡವಪುರ 01.35/13.36 ಗಂಟೆ, ಸುಜಾತಪುರಂ 01.41/01.42 ಗಂಟೆಗೆ ಬರಲಿದೆ.
ನಂಜನಗೂಡು-ಮೈಸೂರು ಕಾಯ್ದಿರಿಸದ ಎಕ್ಸ್‌ಪ್ರೆಸ್(06226 ) ವಿಶೇಷ ನಂಜನಗೂಡಿನಿಂದ 3:10 ಗಂಟೆಗೆ ಹೊರಟು, ಮೈಸೂರಿಗೆ 4:10 ಗಂಟೆಗೆ ತಲುಪಲಿದೆ. ಮಧ್ಯಂತರ ನಿಲ್ದಾಣಗಳಲ್ಲಿ ಆಗಮನ / ನಿರ್ಗಮನ ಸಮಯಗಳು, ಸುಜಾತಪುರಂ 03:15/03:16 ಗಂಟೆ, ತಾಂಡವಪುರ 03:21/15:22 ಗಂಟೆ, ಕಡಕೊಳ 03:27/03:28 ಗಂಟೆ, ಅಶೋಕಪುರಂ 03:48/03:50 ಗಂಟೆ, ಚಾಮರಾಜಪುರಂ 03:55/03:56 ಗಂಟೆಗೆ ಬರಲಿದೆ.
ರೈಲಿನಲ್ಲಿ 21 ಕೋಚ್‌ಗಳು ಇರುತ್ತವೆ ಎಂದು ನೈಋತ್ಯ ರೈಲ್ವೆಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.