ದೊಡ್ಡ ಹರವೇ ಮುಖ್ಯ ರಸ್ತೆಯಲ್ಲಿರುವ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಾಲಯ ಸೇವಾ ಸಮಿತಿ ಟ್ರಸ್ಟ್‌ಯಿಂದ ನಿರ್ಮಿಸಲಾಗಿರುವ ದೇವಸ್ಥಾನದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕ್ಯಾಲೆಂಡರ್್ ಬಿಡುಗಡೆ ಮಾಡಲಾಯಿತು.
- ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ
ಬೈಲುಕುಪ್ಪೆ: ದೊಡ್ಡ ಹರವೇ ಮುಖ್ಯ ರಸ್ತೆಯಲ್ಲಿರುವ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಾಲಯ ಸೇವಾ ಸಮಿತಿ ಟ್ರಸ್ಟ್‌ಯಿಂದ ನಿರ್ಮಿಸಲಾಗಿರುವ ದೇವಸ್ಥಾನದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ತಳಿರು ತೋರಣ, ವಿದ್ಯುತ್ ದ್ವೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರ ಸಮ್ಮುಖದಲ್ಲಿ ಅರ್ಚಕ ಪ್ರವೀಣಾಚಾರ್ ದೇವರಿಗೆ ವಸ್ತ್ರಾಭರಣ ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹೊಸ ವರ್ಷದ ಕ್ಯಾಲೆಂಡರ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ದೊಡ್ಡ ಹರಿವೆ ದೇವಾಲಯದ ಅಧ್ಯಕ್ಷ ಬಿ ಜಗದೀಶ್, ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ವಿ.ಕುಮಾರ್ ಕುಂದನಹಳ್ಳಿ, ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಲೋಕೇಶಾಚಾರ್, ಗ್ರಾಮದ ನಾಗೇಗೌಡ , ಸ್ವಾಮಿ ನಾಯಕ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಸುರೇಶಾಚಾರ್, ಲೋಕೇಶಾಚಾರ್, ವಿನಯ್ ಪ್ರಸಾದ್, ಮಂಜು, ತ್ಯಾಗರಾಜು, ಪ್ರಮೋದ್ ಕುಮಾರ್, ಮಂಜುನಾಥ್, ಸುಬ್ರಹ್ಮಣ್ಯಾಚಾರ್ ಸೇರಿದಂತೆ ಇತರರು ಇದ್ದರು.