ಮೈಸೂರು: ರೋಟರಿ ಮಿಡ್ ಟೌನ್ ವತಿಯಿಂದ ಮಾ.1ರಂದು ಬೆಳಗ್ಗೆ 9ಕ್ಕೆ ನಗರದ ಓವಲ್ ಮೈದಾನದಲ್ಲಿ ಬಾಂಧವ್ಯ ಶೀರ್ಷಿಕೆಯಡಿ ವಿಶೇಷ ಮಕ್ಕಳು, ಪಾಲಕರು, ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಕೇಶ್ ಬಾಬು ತಿಳಿಸಿದರು.
ಸುಮಾರು 500 ವಿಶೇಷ ಮಕ್ಕಳು ಪಾಲ್ಗೊಳ್ಳಲಿದ್ದಾರೆ. 8 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ವಿಶೇಷ ಆಟೋಟ, ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಓಟ, ಲಾಂಗ್ ಜಂಪ್, ಶಾಟ್‌ಪುಟ್ ಮೊದಲಾದ ಕ್ರೀಡೆ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಕೆ.ವಿ.ಭಾಸ್ಕರ್, ಎಚ್.ಎಸ್.ವೀರೇಶ್ ಇದ್ದರು.