ಗೀತಗಾಯನ  
ಮೈಸೂರು

ಹಾಡುಗಳ ಗೀತಗಾಯನ ಕಾರ್ಯಕ್ರಮ ನಾಳೆ

ಅವಿನಾಶ್ ಜೈನಹಳ್ಳಿ
ಮೈಸೂರು: ಹಳೇ ಬೇರು ಹೊಸ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ 12ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಮತ್ತು ಹಳೇ ಕನ್ನಡ, ಹಿಂದಿ ಹಾಡುಗಳ ಗೀತಗಾಯನ ಕಾರ್ಯಕ್ರಮವನ್ನು ಫೆ.28ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರೇವಣ್ಣ ತಿಳಿಸಿದರು.
ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಯೋಗನರಸಿಂಹ ದೇವಸ್ಥಾನ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮೀಜಿ ಉದ್ಘಾಟಿಸುವರು. ರಾಜ್ಯ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ಭೈರಿ, ನೆಹರು ಯುವ ಕೇಂದ್ರದ ನಿವೃತ್ತ ನಿರ್ದೇಶಕ ನಟರಾಜ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ವಕೀಲರಾದ ಎಚ್.ಹರೀಶ್ ಹೆಗ್ಡೆ, ಎಚ್.ಎನ್.ವೆಂಕಟೇಶ್, ಎಸ್.ಜೆ.ಮಧ್ವರಾಜ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಭಾಗವಹಿಸುವರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಟ್ರಸ್ಟಿಗಳಾದ ಶ್ರೀಕಂಠರಾವ್, ರೇಣುಕಾ ಆರಾಧ್ಯ, ಗೋಪಾಲ್ ಇದ್ದರು.