ಕೆ.ಆರ್.ನಗರದ ಗರಡುಗಂಭದ 92ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಗರುಡಗಂಭ ಮಂಜುನಾಥ್, ಅರ್ಜುನಹಳ್ಳಿ ರಾಮ್‌ಪ್ರಸಾದ್, ಎಸ್.ಶಿವರಾಜ್, ಕೋಳಿಶಶಿ, ಮುಖಂಡರಾದ ಸ್ಪೀಟ್ ಮಂಜುನಾಥ್, ಯೋಗೇಶ್, ದಿವಾಕರ್, ಶಿವಕುಮಾರ್, ಕೆ.ಎನ್.ಕುಮಾರ್, ಪುಟ್ಟಸ್ವಾಮಿ, ಪಿ.ಮಹದೇವ್, ಚೌಕಹಳ್ಳಿಮೋಹನ, ನಾಗಣಚಾರಿ, ರಾಜು, ಅರುಣ್, ಸೇರಿದಂತೆ ಇನ್ನಿತರರು ಇದ್ದರು.
ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡಗಂಭ ಮಂಜುನಾಥ್ ಹೇಳಿಕೆ
ಕೆ.ಆರ್.ನಗರ: ಪಟ್ಟಣದ ಗರಡಗಂಭಕ್ಕೆ 92 ವರ್ಷಗಳು ತುಂಬಿದ ಅಂಗವಾಗಿ ಗರುಡಗಂಭ ಸಂವೇದನ ಸಂಘದ ವತಿಯಿಂದ ಮಂಗಳವಾರ ವಾರ್ಷಿಕೋತ್ಸವವನ್ನು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡಗಂಭ ಮಂಜುನಾಥ್ ನೇತೃತ್ವದಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಇತ್ತೀಚೆಗೆ ಆಚರಿಸಲಾಯಿತು.
ತಾಲೂಕು ರೈತ ಯುವ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮ್‌ಪ್ರಸಾದ್ ಮಾತನಾಡಿ, ಇಡೀ ಜಗತ್ತಿಗೆ ಮಾದರಿ ಆಡಳಿತ ನೀಡಿದ, ಸುಖಿ ರಾಜ್ಯದ ಕಲ್ಪನೆಯ ಮೂಲಕ ಅಭಿವೃದ್ಧಿ ಮಾಡಿದ ಮೈಸೂರು ಮಹರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪನೆಯಾದ ಗರುಡಗಂಭಕ್ಕೆ 92 ವರ್ಷಗಳು ತುಂಬಿರುವುದು ಎಲ್ಲರಿರೂ ಸಂತಸ ದಿನವಾಗಿದೆ ಎಂದರು.
ಕರ್ನಾಟಕದಲ್ಲಿಯೇ ವಿದೇಶಿ ಇಂಜಿನಿಯರ್ ಮೂಲಕ ನಗರ ನಿರ್ಮಾಣದ ನಕ್ಷೆ ತಯಾರಿಸಿ ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಪಟ್ಟಣ ನಮ್ಮ ಕೃಷ್ಣರಾಜನಗರವಾಗಿದೆ. ಅದರ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿ ಪುರಪ್ರವೇಶ ದ್ವಾರದಲ್ಲಿ ನಿರ್ಮಿಸಲಾದ ಕಂಬವೇ ಗರಡುಗಂಭವಾಗಿದೆ. ನಂತರ ಇದೊಂದು ವೃತ್ತವಾಗಿ ಇಂದಿಗೂ ಪ್ರಯಾಣಿಕರ ಮನಸೂರೆಗೊಳ್ಳುತ್ತಿದೆ ಎಂದರು.
ರಾಜ್ಯ ಸರ್ಕಾರ ತುಂಡು ಭೂಮಿ ಕಾಯ್ದೆ ತಂದಂತಹ ಸಂದರ್ಭದಲ್ಲಿ ರೈತ ಚಳವಳಿಯಲ್ಲಿ ಭಾಗವಹಿಸಿದ್ದ ಕೆ.ಎಲ್.ಸ್ವಾಮಿ ಅವರು ಗರುಡಗಂಭವನ್ನು ಏರಿ ಪ್ರತಿಭಟಿಸುವ ಮೂಲಕ ಜೈಲು ಸೇರಿದರು. ಅಂದಿನಿಂದ ಅವರು ಗರುಡಗಂಭಸ್ವಾಮಿಯಾಗಿ ಹೆಸರುವಾಸಿಯಾಗಿದ್ದು ಅವರೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮತ್ತು ಗರುಡಗಂಭದ ವಾರ್ಷಿಕೋತ್ವವನ್ನು ಸಾಮಾಜಿಕ ಕಾರ್ಯಕ್ರಮಗಳು, ಕಾಯಕ ಪ್ರಶಸ್ತಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದು ಅವರ ವೃದ್ಧರಾಗಿರುವ ಕಾರಣ ಅವರ ಪುತ್ರ ಗರುಡಗಂಭ ಮಂಜುನಾಥ್ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಉತ್ತಮ ಸೇವಾ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗರಡುಗಂಭ ವೃತ್ತದ ಪಕ್ಕದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆ ನಂತರ ಗರುಡಗಂಭಕ್ಕೆ ಪುಷ್ಪಾರ್ಚನೆ ನೇರವೇರಿಸಿ. ಸಿಹಿ ವಿತರಿಸಿ ಸಂಭ್ರಮಿಸಿದರು
ರಾಷ್ಟ್ರೀಯ ಅಹಿಂದ ಸಂಘಟನೆ ತಾಲೂಕು ಘಟಕದ ಕಾನೂನು ಸಲಹೆಗಾರ ಎಸ್.ಶಿವರಾಜ್, ಹಿಂದುಳಿದ ವರ್ಗಗಳ ತಾಲೂಕು ಘಟಕದ ಅಧ್ಯಕ್ಷ ಕೋಳಿ ಶಶಿ, ಮುಖಂಡರಾದ ಸ್ಪೀಟ್ ಮಂಜುನಾಥ್, ಯೋಗೇಶ್, ದಿವಾಕರ್, ಶಿವಕುಮಾರ್, ಕೆ.ಎನ್.ಕುಮಾರ್, ಪುಟ್ಟಸ್ವಾಮಿ, ಪಿ.ಮಹದೇವ್, ಚೌಕಹಳ್ಳಿ ಮೋಹನ, ನಾಗಣ್ಣಾಚಾರಿ, ರಾಜು, ಅರುಣ್, ಸೇರಿದಂತೆ ಇನ್ನಿತರರು ಹಾಜರಿದ್ದರು.