ಡಾ.ಬಾಬು ಜಗಜೀವನ ರಾಮ್ ಅವರ 119ನೇ ವರ್ಷದ ಜಯಂತಿ ಅಂಗವಾಗಿ ಕೆ.ಆರ್.ನಗರದ ಬಾಬೂಜೀಯವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಶಾಸಕ ಡಿ.ರವಿಶಂಕರ್ ಪುಷ್ಪಾರ್ಚನೆ ಮಾಡಿದರು. ಎಂ.ಎಸ್.ಮಹದೇವ್, ಎಸ್.ಶಿವಪ್ರಕಾಶ್, ಎಂ.ಎಸ್.ರವಿಕುಮಾರ್, ಬಿ.ಎಚ್.ಕುಮಾರ್, ಎಚ್.ಎಂ.ಮಂಜು ಇದ್ದರು.
ಕೆ.ಆರ್.ನಗರ : ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನರಾಮ್ ಅವರ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕಾದ್ದುದ್ದು ನನ್ನ ಜವಬ್ದಾರಿ. ಮುಂದಿನ ವರ್ಷದ ಜಯಂತಿ ಆಚರಣೆಯನ್ನು ಆ ಸಮುದಾಯ ಭವನದಲ್ಲೇ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ಪಟ್ಟಣದ ಬಾಬೂಜಿಯವರ ಪ್ರತಿಮೆ ಬಳಿ ಭಾನುವಾರ ತಾಲೂಕು ಆಡಳಿತ, ಪುರಸಭೆ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಾದಿಗ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 119ನೇ ವರ್ಷದ ಜನ್ಮ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭವನಕ್ಕೆ 2013 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿಶೇಷ ಅನುದಾನ ಸೇರಿ ಈವರೆಗೆ 2.50 ಕೋಟಿ ರೂ.ಗಳ ಅನುದಾನ ಕೊಡಿಸಲಾಗಿದೆ. ಭವನ ಉದ್ಘಾಟನೆಯಾಗಲು ಬೇಕಾಗುವ ಅನುದಾನ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಾಜದವರ ಬೇಡಿಕೆಯಂತೆ ಬಾಬೂಜಿಯವರ ಪುತ್ಥಳಿಯನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದ್ದು, ಮುಂದಿನ ವರ್ಷದ ಜಯಂತಿ ಒಳಗೆ ಈ ಕೆಲಸವು ಕಾರ್ಯಗತಗೊಳ್ಳಲಿದೆ. ಸಮಾಜದ ಬಂದುಗಳು ಇನ್ನಷ್ಟು ಸಂಘಟಿತರಾಗಿ ಬಾಬುಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ತಮ್ಮ ಮಕ್ಕಳನ್ನ ಶಿಕ್ಷಿತರಾಗಿ ಮಾಡಬೇಕೆಂದು ಮನವಿ ಮಾಡಿದರು.
ಬಾಬೂಜಿ ಅವರು ದೇಶ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದ್ದಲ್ಲದೇ ಕೇಂದ್ರದ ಅನೇಕ ಖಾತೆಗಳ ಮಂತ್ರಿಯಾಗಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶಕ್ಕಿದ್ದ ಆಹಾರದ ಅಭದ್ರತೆಯನ್ನು ಹೋಗಲಾಡಿಸಲು ಹಸಿರು ಕ್ರಾಂತಿಯನ್ನು ಆರಂಭಿಸಿ ಹಸಿರು ಕ್ರಾಂತಿ ಹರಿಕಾರರಾಗಿದ್ದರೆಂದು ಬಣ್ಣಿಸಿದರು.
ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿ ನೌಕರರಿಗೆ 12ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8ಗಂಟೆಗೆ ನಿಗದಿ ಮಾಡಿ ದುಡಿಯುವ ನೌಕರರಿಗೆ ಸರ್ಕಾರದ ವತಿಯಿಂದ ಎಲ್ಲ್ಲ ರೀತಿಯ ಸೌಲಭ್ಯ ದೊರೆಯಲು ಕಾರಣರಾದರು ಇದರ ಜತೆಗೆ ರೈಲ್ವೆ ಇಲಾಖೆಯಲ್ಲಿ ಸಕಾಷ್ಟು ಸುಧಾರಣೆಯನ್ನು ತಂದು ದೇಶಕ್ಕೆ ತಮದೇ ಆದ ಅಮೂಲ್ಯ ಕೊಡುಗೆ ನೀಡಿದ ಮಹಾ ನಾಯಕ ಎಂದು ನುಡಿದರು.
ಕೇವಲ ಸರ್ಕಾರದ ಸವಲತ್ತುಗಳ ಮೇಲೆ ಅವಲಂಬಿತರಾಗದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದ ಮುನ್ನೆಲೆಗೆ ತರುವ ಮೂಲಕ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ. ಆಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಇಂದಿನ ಮಹನೀಯರೆಲ್ಲ ವಿದ್ಯಾವಂತರಾದ್ದರಿಂದಲೇ ಸಮಾಜದಲ್ಲಿ ಸುಧಾರಣೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರ್‌ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ ಮಾತನಾಡಿದರು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಸ್.ಶಿವಪ್ರಕಾಶ್, ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಮಾಜಿ ಸದಸ್ಯ ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ರಮೇಶ್, ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಗಡ್ಡ ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಕುಮಾರ್, ಖಜಾಂಚಿ ಹೆಚ್.ಎಂ.ಮಂಜು, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ಎಸ್.ನಂಜುಂಡಸ್ವಾಮಿ, ದಸಂಸ ತಾಲೂಕು ಅಧ್ಯಕ್ಷ ಎಂ.ಎಸ್.ಮಲ್ಲೇಶ್, ಮುಖಂಡರುಗಾಳದ ಎಂ.ಜೆ.ಕುಮಾರ್, ಕಲ್ಲಹಳ್ಳಿ ಶ್ರೀನಿವಾಸ್, ನವೀದ್, ಎಂ.ಟಿ.ರಾಜೇಶ್, ಆದರ್ಶ, ವೆಂಕಟೇಶ್, ಈರಯ್ಯ, ಕರ್ಣಕುಮಾರ್, ನಾಗೇಂದ್ರ, ಶಾಮಿಯಾನ ರಮೇಶ್, ತಿರುಮಲ, ವಜ್ರೇಶ್, ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.