ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ  
ಮೈಸೂರು

ಸಿದ್ದರಾಮಯ್ಯರಿಂದ ಸಾಮಾಜಿಕ ಅನ್ಯಾಯ : ಸಿ.ಟಿ.ರವಿ ಟೀಕೆ

ಮೈಸೂರು: ಸಾಮಾಜಿಕ ನ್ಯಾಯದ ಕುರಿತು ಅತಿ ಹೆಚ್ಚು ಮಾತನಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರೆ, ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಕಡಿತಗೊಳಿಸಿರುವುದು ಸಾಮಾಜಿಕ ನ್ಯಾಯವಲ್ಲ, ಅದು ಸಾಮಾಜಿಕ ಅನ್ಯಾಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದರು.
ಸಂವಿಧಾನಬದ್ಧವಾಗಿ ಡಾ.ಬಿ.ಆರ್. ಅಂಬೇಡ್ಕರ್ ಮೀಸಲಾತಿ ನೀಡಿದ್ದು ಎಸ್ಸಿ, ಎಸ್ಟಿಗಳಿಗೆ ಮಾತ್ರ. ಹಾಗಾಗಿ ಎಸ್ಸಿ, ಎಸ್ಟಿಗಳಿಗೆ ಜನಸಂ ಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವುದು ಸಂವಿಧಾನಬದ್ಧ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ರಾಜಿ ಮಾಡಿಕೊ ಳ್ಳಲು ಸಾಧ್ಯವೇ ಇಲ್ಲ. ಆದರೆ, ಬೇರೆ ಸಮುದಾಯಗಳ ಮೀಸಲಾತಿ ವಿಚಾರದಲ್ಲಿ ಬೇಕಿದ್ದಲ್ಲಿ ರಾಜಿ ಮಾಡಿಕೊಳ್ಳಲು ಸಂವಿಧಾನಬದ್ಧವಾಗಿ ಅಧಿಕಾರವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್ಸಿ, ಎಸ್ಟಿಗಳ ಮೀಸಲಾತಿ ಕಡಿತ ಮಾಡುವ ಸರ್ಕಾರದ ತೀರ್ಮಾನವೇ ಸಾಮಾಜಿಕ ಅನ್ಯಾಯ. ಹಾಗಾಗಿ ಸಿದ್ದರಾಮಯ್ಯ ಅವರು ಸಾಮಾಜಿಕ ಅನ್ಯಾಯದ ಖಳನಾಯಕ ಆಗಬಾರದು. ನ್ಯಾಯಾಲಯ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚು ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗದಿ ಪಡಿಸುವುದಾದರೆ ಧರ್ಮಾಧರಿತವಾಗಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಮೀಸಲಾತಿ ಕಡಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಎಸ್ಸಿ, ಎಸ್ಟಿ ಮೀಸ ಲಾತಿ ಕಡಿತ ಮಾಡಬಾರದು. ಸಂವಿಧಾನ ಸಭೆಯೇ ಧರ್ಮಾಧರಿತ ಮೀಸಲಾತಿಯನ್ನು ವಿರೋಧಿಸಿದೆ ಎಂದರು.
ಸಾಧನಾ ಸಮಾವೇಶದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಸೋಲಿನ ಭೀತಿಯಿಂದ ಚುನಾವಣೆ ಎದುರಿಸುತ್ತಿಲ್ಲ ಎಂದು ಟೀಕಿಸಿದರು.
ಇಸ್ರೇಲ್, ಅಮೇರಿಕ ಹಾಗೂ ಇರಾನ್ ನಡುವಿನ ಯುದ್ಧ ಭಾರತ ಬಯಸಿದ್ದಲ್ಲ. ಆದರೆ, ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಇಂತಹ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಮಾಡಿದರೆ ವಿದೇಶಿ ವಿನಿಮಯ ಹೊರಕ್ಕೆ ಹೋಗುತ್ತದೆ. ಈ ಕಾರಣಕ್ಕೆ ಚಿನ್ನಾಭರಣ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ ಎಂದರು.
ಮೋದಿ ವಿದೇಶ ಪ್ರವಾಸ ಮಾಡುತ್ತಿರುವುದು ಮೋಜು ಮಸ್ತಿಗೆ ಅಲ್ಲ, ಮೋಜು ಮಸ್ತಿಗೆ ಹೋಗುವ ಕಾಂಗ್ರೆಸ್ ನಾಯಕರಿಗೆ ಈ ಪ್ರಶ್ನೆ ಅನ್ವಯ ಆಗುತ್ತದೆ. ಇಟಲಿ ಪ್ರಧಾನಿಗೆ ಮೋದಿ ನೀಡಿರುವ ಉಡುಗೊರೆ ಕುರಿತು ಸಹ ಕಾಂಗ್ರೆಸ್ ನಾಯಕರು ಟೀಕುಸುತ್ತಿದ್ದು, ಇದು ಅವರ ಕೆಟ್ಟ ಮಾನಸಿಕತೆಯನ್ನು ತೋರಿಸುತ್ತದೆ. ಮೋದಿ ಮಾಧ್ಯಮದ ಮುಂದೆ ಮಾತನಾಡದೆ ಇರಬಹುದು. ಆದರೆ ಅವರು ‘ಗ್ರೇಟೆಸ್ಟ್ ಕಮ್ಯುನಿಕೇಟರ್’ ಎಂದು ಸಮರ್ಥಿಸಿಕೊಂಡರು.
ರಾಜ್ಯದ ಕೆಲವು ಭಾಗದಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಜನರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆ ಆಗಿರಬೇಕಿತ್ತು. ಅವರಿಗೆ ಹಿಜಾಬ್ ಆದ್ಯತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.