ಸುತ್ತೂರು ಗ್ರಾಮದಲ್ಲಿ ಅನಾರೋಗ್ಯ ಪೀಡಿತೆ ನಂಜಮ್ಮ ಅವರಿಗೆ ಸುತ್ತೂರು ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವೀಲ್‌ಚೇರ್ ವಿತರಿಸಲಾಯಿತು.  
ಮೈಸೂರು

ಅಂಗವಿಕಲರಿಗೆ ಎಸ್‌ಕೆಡಿಆರ್‌ಡಿಪಿ ನೆರವು

ಲೋಕೇಶ್ ಮನು. ಡಿ
ಕಲ್ಕುಂದ: ನಂಜನಗೂಡು ತಾಲೂಕು ಸುತ್ತೂರು ಗ್ರಾಮದ ಅನಾರೋಗ್ಯ ಪೀಡಿತೆ ನಂಜಮ್ಮ ಅವರಿಗೆ ಸುತ್ತೂರು ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವೀಲ್‌ಚೇರ್ ವಿತರಿಸಲಾಯಿತು.
ಯೋಜನೆಯ ನಂಜನಗೂಡು ಕ್ಷೇತ್ರ ಯೋಜನಾಧಿಕಾರಿ ಧರ್ಮರಾಜು ಮಾತನಾಡಿ, ನಂಜಮ್ಮ 7 ವರ್ಷಗಳಿಂದ ನಡೆದಾಡಲು ತೊಂದರೆ ಪಡುತ್ತಿದ್ದರು. ಇದನ್ನು ಅರಿತು ಸಂಸ್ಥೆಯಿಂದ ಉಚಿತವಾಗಿ ವೀಲ್‌ಚೇರ್ ನೀಡಲಾಗಿದೆ. ಅನಾರೋಗ್ಯ ಪೀಡಿತರು, ವಿಕಲಚೇತನರು ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿ ಬದುಕಲು ನೆರವಾಗುವಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಉಚಿತವಾಗಿ ವೀಲ್‌ಚೇರ್, ಲೆಗ್‌ಸ್ಟಿಕ್, ವಾಟರ್ ಬೆಡ್, ವಾಕರ್‌ಗಳನ್ನು ನೀಡುತ್ತಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಿಕ್ಕಮಾದಪ್ಪ, ಸ್ವ-ಸಹಾಯ ಸಂಘಗಳ ಒಕ್ಕೂಟ ಉಪಾಧ್ಯಕ್ಷೆ ವಾಣಿ, ಕೀರ್ತಿ ಕುಮಾರ್, ಸೇವಾಪ್ರತಿನಿಧಿಗಳು, ಮೇಲ್ವಿಚಾರರು, ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.