ಎಸ್‌ಐಆರ್ ಕುರಿತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ವಿಕ್ರಂ ಅಯ್ಯಂಗಾರ್, ಎಸ್.ಎನ್.ರಾಜೇಶ್, ಚಕ್ರಪಾಣಿ, ಮಹಾನ್ ಶ್ರೇಯಸ್, ಸುಚೀಂದ್ರ, ಜಗದೀಶ್, ದೂರ ರಾಜಣ್ಣ, ದಯಾನಂದ ನಾಯಕ್, ರವಿ, ರಾಕೇಶ್, ದುರ್ಗಾ ಪ್ರಸಾದ್ ಇದ್ದರು. 
ಮೈಸೂರು

ಮೈಸೂರಿನಲ್ಲಿ ಸಾರ್ವಜನಿಕರಿಗೆ ಎಸ್‌ಐಆರ್ ಜಾಗೃತಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳು ಮನೆ ಬಳಿ ಬಂದಾಗ ಸೂಕ್ತ ದಾಖಲೆ, ಮಾಹಿತಿ ನೀಡಿ ಮತದಾನದ ಹಕ್ಕು ಪಡೆಯಬೇಕು
  • ಯಾವುದೇ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಕೈಬಿಡದಂತೆ ಕ್ರಮವಹಿಸಬೇಕು
ಮೈಸೂರು:ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರದ ಬಸ್ ನಿಲ್ದಾಣದಲ್ಲಿ ಭಿತ್ತಿಪತ್ರ ಹಿಡಿದು, ಮತಪಟ್ಟಿಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳಿ. ಮತಗಟ್ಟೆ ಅಧಿಕಾರಿಗಳು ಮನೆ ಬಳಿ ಬಂದಾಗ ಸೂಕ್ತ ದಾಖಲೆ, ಮಾಹಿತಿ ನೀಡಿ ಮತದಾನದ ಹಕ್ಕು ಪಡೆಯಬೇಕು ಎಂದು ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದರು.
ಎಸ್‌ಐಆರ್ ದೇಶದ ಪ್ರಜೆ ಹೌದು, ಅಲ್ಲವೋ ಎಂಬುದನ್ನು ತೀರ್ಮಾನ ಮಾಡುವ ಒಂದು ಪ್ರಕ್ರಿಯೆ. ನಾವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ರಾಷ್ಟ್ರದ ಹಿತದೃಷ್ಟಿಯಿಂದ ಮಾಡುವ ಕಾರ್ಯ ಇದಾಗಿದೆ. ಯಾವುದೇ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಕೈಬಿಡದಂತೆ ಕ್ರಮವಹಿಸಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಪಕ್ಷದ ಬಿಎಲ್‌ಎ ರಾಜಕೀಯ ಮಾಡುವಂತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾಗಿರಬೇಕು ಎಂದು ಹೇಳಿದರು.
ಕೆಎಂಪಿಕೆ ಟ್ರಸ್ಟ್‌ನ ಎಸ್.ಎನ್.ರಾಜೇಶ್, ಚಕ್ರಪಾಣಿ, ಮಹಾನ್ ಶ್ರೇಯಸ್, ಸುಚೀಂದ್ರ, ಜಗದೀಶ್, ದೂರ ರಾಜಣ್ಣ, ದಯಾನಂದ ನಾಯಕ್, ರವಿ, ರಾಕೇಶ್, ದುರ್ಗಾ ಪ್ರಸಾದ್ ಇದ್ದರು.