ಭಗವಾನ್ 1008 ಶ್ರೀ ಪಾರ್ಶ್ವನಾಥ ದಿಗಂಬರ ಜಿನಮಂದಿರ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಟಿ.ಎಸ್.ಶ್ರೀವತ್ಸ, ಎಂ.ಪಿ.ನಾಭಿರಾಜ್ ಇತರರು ಭಾಗವಹಿಸಿದ್ದರು. 
ಮೈಸೂರು

ರಜತ ಮಹೋತ್ಸವ ಧಾರ್ಮಿಕ ಕೈಂಕರ್ಯ ಸಂಪನ್ನ

ಅವಿನಾಶ್ ಜೈನಹಳ್ಳಿ
ಮೈಸೂರು: ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯ ಹಾಗೂ 1008 ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ‘ಭಗವಾನ್ 1008 ಶ್ರೀ ಪಾರ್ಶ್ವನಾಥ ದಿಗಂಬರ ಜಿನಮಂದಿರ’ದ ರಜತ ಮಹೋತ್ಸವ ನೆರವೇರಿತು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಜಿನಮಂದಿರದಲ್ಲಿ ಇತ್ತೀಚೆಗೆ ಶ್ರೀ ಸಿದ್ಧಾಂತ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಸಿದ್ಧಾಂತ ಕೀರ್ತಿ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಧಾರ್ಮಿಕ ಸಭೆ, ಮಹಾ ನವಗ್ರಹ ಶಾಂತಿ ಹೋಮ, 108 ಕಲಶ ಮಹಾಭಿಷೇಕ, ‘ನಾಂದಿಮಂಗಲ’, ‘ಪಂಚಾಮೃತ ಅಭಿಷೇಕ’, ‘ನವದೇವತ ಆರಾಧನೆ’, ‘ಕಲ್ಯಾಣ ಮಂದಿರ ವಿಧಾನ ಆರಾಧನೆ’ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಉಪನ್ಯಾಸ ನೀಡಿದರು.
ವಿದ್ವಾನ್ ಮೈಸೂರು ಎನ್.ಶ್ರೀನಾಥ್ ಮತ್ತು ರಜತ್ ಶರ್ಮಾ ಅವರು ‘ಜಿನಗಾನ ಸುಧಾ’ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಟ್ರಸ್ಟ್‌ನ ಎಂ.ಪಿ.ನಾಭಿರಾಜ್, ಶಾಮನಂದ್ ಸಾಗರ್, ಡಾ.ಎಂ.ಎಸ್.ಪದ್ಮಾ, ಲಕ್ಷ್ಮೀ ರಮಣ, ಎಂ.ಪಿ. ನಾಭಿ ರಾಜ್, ನಮಿತೇಜ, ಕೆ.ಬಿ.ಎಲ್. ಕುಮಾರ್, ಪಿ. ಸುಧಾಕರ್, ನೀರಜಾ ಕುಂದೇಶ್ ಭಾಗವಹಿಸಿದ್ದರು.