ಭಗವಾನ್ 1008 ಶ್ರೀ ಪಾರ್ಶ್ವನಾಥ ದಿಗಂಬರ ಜಿನಮಂದಿರ 
ಮೈಸೂರು

ಫೆ.1 ಮತ್ತು 2 ರಂದು ಭಗವಾನ್ 1008 ಶ್ರೀ ಪಾರ್ಶ್ವನಾಥ ದಿಗಂಬರ ಜಿನಮಂದಿರ’ದ ರಜತ ಮಹೋತ್ಸವ

ಮೈಸೂರು: ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯ ಹಾಗೂ 1008 ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ‘ಭಗವಾನ್ 1008 ಶ್ರೀ ಪಾರ್ಶ್ವನಾಥ ದಿಗಂಬರ ಜಿನಮಂದಿರ’ದ ರಜತ ಮಹೋತ್ಸವವನ್ನು ಫೆ.1 ಮತ್ತು 2 ರಂದು ಆಯೋಜಿಸಲಾಗಿದೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಜಿನಮಂದಿರದಲ್ಲಿ ಎರಡು ದಿನಗಳ ಕಾಲ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಸಿದ್ಧಾಂತ ಕೀರ್ತಿ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಫೆ.1ರಂದು ಬೆಳಗ್ಗೆ 6 ಗಂಟೆಗೆ ಮಹಾ ನವಗ್ರಹ ಶಾಂತಿ ಹೋಮ, 10 ಗಂಟೆಗೆ 108 ಕಲಶ ಮಹಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಟಿ.ಎಸ್.ಶ್ರೀವತ್ಸವ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.2 ರಂದು 6 ಗಂಟೆಗೆ ‘ನಾಂದಿಮಂಗಲ’, ‘ಪಂಚಾಮೃತ ಅಭಿಷೇಕ’, ‘ನವದೇವತ ಆರಾಧನೆ’, ‘ಕಲ್ಯಾಣ ಮಂದಿರ ವಿಧಾನ ಆರಾಧನೆ’ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಬೆ.11 ಗಂಟೆಗೆ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 6 ಗಂಟೆಗೆ ವಿದ್ವಾನ್ ಮೈಸೂರು ಎನ್.ಶ್ರೀನಾಥ್ ಮತ್ತು ರಜತ್ ಶರ್ಮಾ ಅವರಿಂದ ‘ಜಿನಗಾನ ಸುಧಾ’ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.