ರಾಷ್ಟ್ರೀಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ನ ಹಿಪ್‌ಹಾಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ನಗರದ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು
ಮೈಸೂರು: ಪುದುಚೇರಿಯ ಕಂಬನ್ ಕಲೈ ಅರಣಗಂ ಒಳಾಂಗಣ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 11ನೇ ರಾಷ್ಟ್ರೀಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಹಿಪ್‌ಹಾಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ವಿವಿಧ ರಾಜ್ಯಗಳಿಂದ ಈ ಚಾಂಪಿಯನ್‌ಶಿಪ್‌ಗೆ ಶಾಸ್ತ್ರೀಯ ನೃತ್ಯಗಾರರು, ಜಾನಪದ, ಫ್ರೀಸ್ಟೈಲ್, ಹಿಪ್ ಹಾಪ್ ಮತ್ತು ಬ್ಯಾಟಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸ್ಪರ್ಧಿಸಿದ್ದರು. ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಹಿಪ್‌ಹಾಪ್ ಸ್ಪರ್ಧೆಯಲ್ಲಿ ವಿಜೇತರಾದರು.
ವಿಜೇತ ತಂಡದಲ್ಲಿ ವಿದ್ಯಾರ್ಥಿಗಳಾದ ಹನಿಷಾ, ಶಾಶ್ವಿತಾ, ಚಾಂದಿನಿ, ಶಿಖಾ, ಹೇಮಂತ್ ಮತ್ತು ಹಂಸಪ್ರಿಯ ಭಾಗವಹಿಸಿದ್ದರು. ತಂಡಕ್ಕೆ ಅಶ್ವಾಕ್‌ನೃತ್ಯ ಸಂಯೋಜನೆ ಹಾಗೂ ತರಬೇತಿ ನೀಡಿದ್ದರು.