ಶಿಕ್ಷಕಿ ಸುಜಾತ ಆರ್.ಶೆಟ್ಟಿ ಅವರಿಗೆ ‘ಶ್ರೀ ಮಹಾವೀರ ಅಹಿಂಸಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಂ.ಆರ್.ಸುನೀಲ್ ಕುಮಾರ್, ಜೆ.ಎನ್.ನಂದಿನಿ ಸಂಜಯ್, ಜಯರತ್ನ ಇದ್ದರು. 
ಮೈಸೂರು

ಸುಜಾತ ಆರ್.ಶೆಟ್ಟಿಗೆ ಶ್ರೀ ಮಹಾವೀರ ಅಹಿಂಸಾ ಪ್ರಶಸ್ತಿ ಪ್ರದಾನ

ಮಹಾವೀರ ಸೇವಾ ಸಂಸ್ಥಾನ್ ಮೈಸೂರು ವತಿಯಿಂದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಅಂಗವಾಗಿ ಸೋಮವಾರ ಶಿಕ್ಷಕಿ ಸುಜಾತ ಆರ್.ಶೆಟ್ಟಿ ಅವರಿಗೆ ‘ಶ್ರೀ ಮಹಾವೀರ ಅಹಿಂಸಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನಗರದ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್.ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀ ದಿಗಂಬರ ಜೈನ ಸಮಾಜದ ಜಿಲ್ಲಾಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಪದ್ಮಶ್ರೀ ಜೈನ ಮಹಿಳಾ ಸಮಾಜದ ಜಿಲ್ಲಾಧ್ಯಕ್ಷೆ ಜೆ.ಎನ್.ನಂದಿನಿ ಸಂಜಯ್, ಎಂ.ಎಲ್.ಬೋರ್ಡಿಂಗ್ ಹೋಂ ಸಹ ಕಾರ್ಯದರ್ಶಿ ಜಯರತ್ನ ಇದ್ದರು.