ನಗರದ ಬಸವೇಶ್ವರ ವೃತದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿಯನ್ನು ಆಚರಿಸಲಾಯಿತು. ಕಲ್ಮಳ್ಳಿ ನಟರಾಜು, ಸುರೇಶ್ ಕುರುಬರ ಹುಂಡಿ, ಮುಳ್ಳೂರು ಪ್ರಕಾಶ್ ಇತರರು ಇದ್ದರು. 
ಮೈಸೂರು

ಬೆಳಕಿನೊಳಗಣ ಮಹಾ ಬೆಳಕು ಶಿವಕುಮಾರ ಸ್ವಾಮೀಜಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • Shivakumar Swamiji
ನಂಜನಗೂಡು: ವಿದ್ಯಾನಗರದ ಸಿದ್ದಗಂಗಾ ಭಕ್ತ ಬಳಗದ ವತಿಯಿಂದ ಡಾ. ಶಿವಕುಮಾರ ಸ್ವಾಮೀಜಿಯ 119ನೇ ಜಯಂತೋತ್ಸವ ಕಾರ್ಯಕ್ರಮವನ್ನು ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ಬುಧವಾರ ರಾತ್ರಿ ಹಮ್ಮಿಕೊಳ್ಳಲಾಗಿತ್ತು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದ ಅಖಿಲ ಭಾರತ ವೀರಶೈವ ಮೈಸೂರು ಜಿಲ್ಲಾ ಘಟಕದ ನಿರ್ದೇಶಕ ಕಲ್ಮಳ್ಳಿ ನಟರಾಜು, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ವೀರಾಪುರದ ಶಿವಣ್ಣ ಮುಂದೊಂದು ದಿನ ಜಾತಿ, ಧರ್ಮ, ಲಿಂಗ ಭೇದವೆಣಿಸದೆ ತನ್ನ ಬಳಿ ಬಂದ ಲಕ್ಷಾಂತರ ಜನರಿಗೆ ಬೆಳಕಾದ ಮಹಾಯೋಗಿ. ಅವರು ಬೆಳಕಿನೊಳಗಣ ಮಹಾಬೆಳಕು ಎಂದು ಬಣ್ಣಿಸಿದರು.
ನಾವು ಇರುವಲ್ಲಿಯೇ ನೊಂದವರಿಗೆ, ಅಸಹಾಯಕರಿಗೆ, ದೀನರಿಗೆ ಸಹಾಯ ಮಾಡಿದರೆ ಅದೇ ನಾವು ಶ್ರೀಗಳಿಗೆ ಸಲ್ಲಿಸುವ ನಿಜವಾದ ಪೂಜೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಸಾವಿರಾರು ಜನರಿಗೆ ಪ್ರಸಾದ ವಿತರಿಸಲಾಯಿತು. ಸಂಚಾಲರಾದ ಸುರೇಶ್ ಕುರುಬರಹುಂಡಿ, ಮುಳ್ಳೂರು ಪ್ರಕಾಶ್, ನಾಗರಾಜು, ಶಿವಲಿಂಗಸ್ವಾಮಿ, ತಾಲೂಕು ಪ್ರತಿಧ್ವನಿ ವೇದಿಕೆ ಅಧ್ಯಕ್ಷರಾದ ಕೀರ್ತಿ ಚಂದ್ರವಾಡಿ, ಶಿಕ್ಷಕರಾದ ಮನೀಶ್ ಹೊರೆಯಾಲ ಈಶ್ವರ್, ಹೊರೆಯಾಲ ಮಹೇಶ್, ಬಿಳುಗಲಿ ಶಿವಕುಮಾರ್, ಬದನವಾಳು ಪುಟ್ಟ ಬುದ್ದಿ, ಬಸವ ಯೋಗೀಶ್, ಚೆನ್ನಪ್ಪ, ಪ್ರಭುಸ್ವಾಮಿ ರಾಜೇಂದ್ರ ರಾಜ ಶೇಖರ್, ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಮಾವತಿ ಇತರರು ಉಪಸ್ಥಿತರಿದ್ದರು.