ಶಿವರಾಂಪೇಟೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯನ್ನು ನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ ಉದ್ಘಾಟಿಸಿದರು. ಮೈ.ಕಾ. ಪ್ರೇಮ್‌ಕುಮಾರ್, ವಿನಯ್‌ಕುಮಾರ್, ಜಗದೀಶ್, ವಿಕ್ರಂ ಅಯ್ಯಂಗಾರ್, ಎಸ್.ಎನ್.ರಾಜೇಶ್, ಬೈರತಿ ಲಿಂಗರಾಜು, ಅನೋಜ್ ಸರಸ್ವತ, ಹರೀಶ್ ಗೌಡ, ಟಿ.ಎಸ್.ಅರುಣ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಚಪ್ ಇತರರಿದ್ದರು.
- ನಗರಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್‌ಗೌಡ ಅಭಿಮತ
ಮೈಸೂರು: ಯುವಕರಿಗೆ ಧೈರ್ಯ, ಸಾಹಸ ಹಾಗೂ ಅಭಿಮಾನದ ಸಂಕೇತವಾಗಿರುವ ಶಿವಾಜಿ ಮಹಾರಾಜರು ಆದರ್ಶಪ್ರಾಯರಾಗಿದ್ದಾರೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ್ 396ನೇ ಜಯಂತಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿವರಾಂಪೇಟೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಇಂದಿನ ಯುವಪೀಳಿಗೆ ಛತ್ರಪತಿಯಂತೆಯೇ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ದೇಶ ಕಂಡ ಅಪ್ರತಿಮ ಹೋರಾಟಗಾರ ಅವರು. ಅನೇಕ ವೈರಿಗಳನ್ನು ಹಿಮ್ಮೆಟ್ಟಿಸಿ ಸಾಮ್ರಾಜ್ಯ ಕಟ್ಟಿ ಹಿಂದುತ್ವ ಉಳಿಸಿದ ಹಿಂದೂಗಳ ಹೃದಯ ಸಾಮ್ರಾಟರಾಗಿದ್ದಾರೆ. ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಏಕಾಂಗಿಯಾಗಿ ಹೋರಾಟ ಮಾಡಿದವರು. ಸೈನ್ಯ ಕಟ್ಟಿಕೊಂಡು ದೊಡ್ಡ ದೊಡ್ಡ ಸೈನ್ಯ ಹೊಂದಿದ್ದ ದೇಶ ವಿರೋಧಿಗಳಿಗೆ ಸೋಲಿನ ರುಚಿ ತೋರಿಸಿದವರು ಎಂದು ಸ್ಮರಿಸಿದರು.
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮ್‌ಕುಮಾರ್, ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್‌ಕುಮಾರ್, ಜಗದೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್.ಎನ್.ರಾಜೇಶ್, ಬೈರತಿ ಲಿಂಗರಾಜು, ಅನೋಜ್ ಸರಸ್ವತ, ಹರೀಶ್‌ಗೌಡ, ಟಿ.ಎಸ್.ಅರುಣ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಚಪ್ ಇತರರಿದ್ದರು.