ಮೈಸೂರಿನಲ್ಲಿ ಶಿರ್ವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ಐದನೇ ಅಖಿಲ ಭಾರತ ಶಿರ್ವಿ ಮಹಾಸಭಾ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಸುರರಾಮ್ ಚೌಧರಿ, ಗೋಪರಮ್ ರಾಥೋಡ್, ಮೋಹನ್‌ಲಾಲ್ ಬರ್ಫಾ, ಲಖರಾಮ್, ಗಣೇಶಮಲ್ ಸುತಾರ್,ಬನ್ನೂರು ಮಹೇಂದ್ರ ಸಿಂಗ್ ರಾಜಪುರೋಹಿತ್, ಅಗರರಾಮ್ ಇತತರು ಇದ್ದರು. 
ಮೈಸೂರು

ಮೈಸೂರಿನಲ್ಲಿ ನಡೆದ ಶಿರ್ವಿ ಮಹಾಸಭಾ ಕ್ರೀಡಾ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನ ಮೂಲದ ಶಿರ್ವಿ ಸಮುದಾಯದವರಿಗಾಗಿ ಕ್ರೀಡಾಕೂಟ
  • ಶಾಸಕ ಕೆ.ಹರೀಶ್‌ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ ಚಾಲನೆ
ಮೈಸೂರು: ನಗರದ ಶಿರ್ವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ಐದನೇ ಅಖಿಲ ಭಾರತ ಶಿರ್ವಿ ಮಹಾಸಭಾ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ರಾಜಸ್ಥಾನ ಮೂಲದ ಶಿರ್ವಿ ಸಮುದಾಯದವರಿಗಾಗಿ ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಶಾಸಕ ಕೆ.ಹರೀಶ್‌ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ಐಪಂಥ್‌ನ ಧಾರ್ಮಿಕ ಗುರು ದಿವಾನ್‌ಮಾಧವ ಸಿಂಗ್ ಸಾನ್ನಿಧ್ಯ ವಹಿಸಿದ್ದರು.
ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್‌ಗೌಡ, ನಗರಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಮ್, ಬಿಜೆಪಿ ಮಾಜಿ ನಗರಾಧ್ಯಕ್ಷ ಶಿವಕುಮಾರ್, ಟ್ರಸ್ಟ್ ಸಂಸ್ಥಾಪಕ ಸುರರಾಮ್ ಚೌಧರಿ, ಶರ್ವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋಪರಮ್ ರಾಥೋಡ್, ಕಾರ್ಯದರ್ಶಿ ಮೋಹನ್‌ಲಾಲ್ ಬರ್ಫಾ, ಖಜಾಂಚಿ ಲಖರಾಮ್, ನಗರದ ರಾಜಸ್ಥಾನ ವಿಷ್ಣು ಸೇವಾ ಟ್ರಸ್ಟ್ ಅಧ್ಯಕ್ಷ ಗಣೇಶಮಲ್ ಸುತಾರ್, ಪರ್ಯಾಯ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರ ಸಿಂಗ್ ರಾಜಪುರೋಹಿತ್, ಅಗರರಾಮ್ ಇತತರು ಇದ್ದರು.