ಹುಣಸೂರು ಕಸಬಾ ವಲಯ ವ್ಯಾಪ್ತಿಯ ಕ್ರೀಡಾಕೂಟದಲ್ಲಿ ಶಾಸ್ತ್ರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದರೆ. ದೈಹಿಕ ಶಿಕ್ಷಣ ಶಿಕ್ಷಕ ಕಾರ್ತೀಕ್ ಮತ್ತು ಕ್ರೀಡಾಪಟುಗಳು ಇದ್ದಾರೆ. 
ಮೈಸೂರು

ಶಾಸ್ತ್ರಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿ

ಹುಣಸೂರು : ಹುಣಸೂರು ತಾಲೂಕು ಕಸಬಾ ವಲಯ ವ್ಯಾಪ್ತಿಯ ಕ್ರೀಡಾಕೂಟದಲ್ಲಿ ನಗರದ ಶಾಸ್ತ್ರಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ನಗರದ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ ಶಾಲೆಯ ವಾಲಿಬಾಲ್ ತಂಡ ಪ್ರಥಮ ಸ್ಥಾನ ಗಳಿಸಿದೆ. 100ಮೀ.ಓಟದಲ್ಲಿ ಶಬೀರ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. 200 ಮೀ.ಓಟದಲ್ಲಿ ದಿಗಂತ್ ದ್ವಿತೀಯ, 800ಮೀ. ಓಟದಲ್ಲಿ ಜೀವನ್ ಪ್ರಥಮ, 1500ಮೀ. ಓಟದಲ್ಲಿ ಸೃಜನ್ ದ್ವಿತೀಯ, ಟ್ರಿಪಲ್ ಜಂಪ್‌ನಲ್ಲಿ ಗಂಭೀರ್ ತೃತೀಯ, 4*100 ರಿಲೇಯಲ್ಲಿ ಪ್ರಥಮ(ಶಬೀರ್, ಗಂಭೀರ್, ದಿಗಂತ್ ಮತ್ತು ಫರಾಜ್), 4*400ಮೀ.ರಿಲೇಯಲ್ಲಿ ಪ್ರಥಮ (ಜೀವನ್, ಗಂಭೀರ್, ಸೃಜನ್ ಮತ್ತು ಯಶಸ್)ಸ್ಥಾನ ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಕ್ರೀಡಾಪಟುಗಳ ಸಾಧನೆಯನ್ನು ಆಡಳಿತ ಮಂಡಳಿ, ಸಹಶಿಕ್ಷಕರು ದೈಹಿಕ ಶಿಕ್ಷಣ ಶಿಕ್ಷಕ ಕಾರ್ತೀಕ್ ಅಭಿನಂದಿಸಿದ್ದಾರೆ.