‘ಸೈಬರ್ ವಂಚನೆ ಮತ್ತು ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅಗಮ್ಯ ಸೈಬರ್ ಟೆಕ್ ಸಂಸ್ಥೆಯ ಸಿಇಒ ಅಕ್ಷಯ್ ನಾಗರಾಜ್ ನಾಯ್ಕ ಮಾತನಾಡಿದರು. ಎಚ್.ಎಸ್.ಸುರೇಶ್ ಬಾಬು, ಎಲ್.ಅರುಣ್ ಕುಮಾರ್, ಡಾ.ಎಲ್.ಬಸವರಾಜ್, ಎಂ.ಕೆ.ನಂಜಯ್ಯ, ಕೆ.ಶ್ರೀನಿವಾಸ ಪಾಲ್ಗೊಂಡಿದ್ದರು.
- ಸೈಬರ್ ಅಪರಾಧ ಸಂಖ್ಯೆ ಎಲ್ಲೆಡೆ ಹೆಚ್ಚು
- ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೆ ಕುರಿತು ಸ್ವಯಂ ನಿಯಂತ್ರಣ ಅಗತ್ಯ
- ಸೈಬರ್ ಅಪರಾಧ ಕುರಿತು 1930 ಅಥವಾ 112ಗೆ ಕರೆ ಮಾಡಬೇಕು.
ಮೈಸೂರು: ಸೈಬರ್ ವಂಚನೆಯಿಂದ ಪಾರಾಗಲು ಸಾಮಾಜಿಕ ಜಾಲ ತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೆಯನ್ನು ನಿಲ್ಲಿಸಬೇಕು ಎಂದು ಅಗಮ್ಯ ಸೈಬರ್ ಟೆಕ್ ಸಂಸ್ಥೆಯ ಸಿಇಒ ಅಕ್ಷಯ್ ನಾಗರಾಜ್ ನಾಯ್ಕ ಹೇಳಿದರು.
ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಸೈಬರ್ ಸೆಕ್ಯೂರಿಟಿ ವಿಭಾಗ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗ ಸಹಯೋಗದಲ್ಲಿ ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ಸೈಬರ್ ವಂಚನೆ ಮತ್ತು ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈಬರ್ ಅಪರಾಧ ಸಂಖ್ಯೆ ಎಲ್ಲೆಡೆ ಹೆಚ್ಚಾಗುತ್ತಿದೆ. ದೇಶದಲ್ಲಿ ಮೂರು ಜನರಲ್ಲಿ ಒಬ್ಬರು ಈ ಅಪರಾಧದ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಸೈಬರ್ ವಂಚನೆಯಿಂದ ದೂರು ಉಳಿಯಬೇಕಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೆ ಕುರಿತು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಿದೆ ಎಂದರು.
ಇದೀಗ ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ಸುಲಭ, ಸರಳವಾಗಿ ಸಾರ್ವಜನಿಕರು ಸೈಬರ್ ವಂಚನೆ ಜಾಲದ ದಾಳಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ವಂಚಕರು ಲೋನ್ ಆ್ಯಪ್, ಎಪಿಕೆ ಫೈಲ್, ಎಸ್‌ಬಿಐ ರಿವಾರ್ಡ್ ಪಾಯಿಂಟ್ಸ್, ಕೆವೈಸಿ ಅಪ್‌ಡೇಟ್ ಹೀಗಿ ವಿವಿಧ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ, ಅವರಿಂದ ಒಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಿದ್ದರು. ಅಮಾಯಕ ಜನರನ್ನು ಬೆದರಿಸಿ ಹಣ ಕೀಳುತ್ತಿದ್ದಾರೆ ಎಂದು ತಿಳಿಸಿದರು.
ಸೈಬರ್ ಅಪರಾಧ ಕುರಿತು 1930 ಅಥವಾ 112ಗೆ ಕರೆ ಮಾಡಬೇಕು. ಇದರಿಂದಾಗಿ ಕಳೆದುಕೊಂಡ ಹಣವನ್ನು 24 ಗಂಟೆಯೊಳಗೆ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್.ಎಸ್.ಸುರೇಶ್ ಬಾಬು, ಎಟಿಎಂಇಸಿಇ ಅಧ್ಯಕ್ಷ ಎಲ್.ಅರುಣ್ ಕುಮಾರ್, ಎಟಿಎಂಇಸಿಇ ಪ್ರಾಂಶುಪಾಲ ಡಾ. ಎಲ್.ಬಸವರಾಜ್, ಐಇಐ ಕಾರ್ಯದರ್ಶಿ ಎಂ.ಕೆ.ನಂಜಯ್ಯ, ಕೆ.ಶ್ರೀನಿವಾಸ ಪಾಲ್ಗೊಂಡಿದ್ದರು.