ಕಣಗಾಲು ಗ್ರಾಮದಲ್ಲಿ ಶ್ರೀ ಶನೈಶ್ಚರ ಉತ್ಸವ ಮೂರ್ತಿಗೆ ಕಾವೇದಿ ನದಿಯ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 
ಮೈಸೂರು

ಕಣಗಾಲು ಗ್ರಾಮದಲ್ಲಿ ಶನೈಶ್ಚರ ಉತ್ಸವ

ಪ್ರಮುಖ ಮುಖ್ಯಾಂಶಗಳು

  • ಕಣಗಾಲು ಗ್ರಾಮ
  • ಕಾವೇರಿ ನದಿಯಲ್ಲಿ ಶ್ರೀ ಶನೈಶ್ಚರ ಉತ್ಸವ ಮೂರ್ತಿಗೆ ವಿಶೇಷ ಪೂಜೆ
ಬೆಟ್ಟದಪುರ: ಕಣಗಾಲು ಗ್ರಾಮದಲ್ಲಿ ಶ್ರೀ ಶನೈಶ್ಚರ ಉತ್ಸವ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.
ಭಾನುವಾರದಿಂದಲೇ ದೇಗುಲದಲ್ಲಿ ಪೂಜಾ ಕೈಕಂರ್ಯ ಆರಂಭವಾಗಿತ್ತು. ಸೋಮವಾರ ಬೆಳಗ್ಗೆ ಕಾವೇರಿ ನದಿಯಲ್ಲಿ ಶ್ರೀ ಶನೈಶ್ಚರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಲ್ಲಕ್ಕಿ ಮೇಲೆ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಶ್ರೀವೀರಭದ್ರ ವೇಷಧಾರಿಗಳ ವೀರಗಾಸೆ ಭಕ್ತರ ವಿಶೇಷ ಗಮನ ಸೆಳೆಯಿತು. ಮೆರವಣಿಗೆ ಮಾರ್ಗದ್ದುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಆಗಮಿಸಿದ ಭಕ್ತರಿಗೆ ಪ್ರಸಾದ, ಅನ್ನ ಸಂತರ್ಪಣೆ ಮಾಡಲಾಯಿತು. ಕಣಗಾಲು ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತರು ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.