ಸರಗೂರು ತಾಲೂಕಿನ ಶ್ರೀ ಚಿಕ್ಕದೇವಮ್ಮನ ಬೆಟ್ಟದ ಹಾಲುಗಡ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿAದ ನಡೆಯಿತು. 
ಮೈಸೂರು

ಹಾಲುಗಡ ಜಾತ್ರಾ ಮಹೋತ್ಸವ

ಎ. ಆರ್. ರಘುರಾಮ
ಸರಗೂರು : ತಾಲೂಕಿನ ಶಕ್ತಿದೇವತೆ ಶ್ರೀ ಚಿಕ್ಕದೇವಮ್ಮನ ಬೆಟ್ಟದಲ್ಲಿ ಯುಗಾದಿ ಅಂಗವಾಗಿ ಗುರುವಾರ ದಂದು ನಡೆದ ಜಾತ್ರಾ ಮಹೋತ್ಸವ, ಕಪಿಲ ನದಿ ದಡದಲ್ಲಿ ಹಾಲುಗಡ ಜಾತ್ರಾ ಮಹೋತ್ಸವ ವಿಜೃಂಭಣೆಯಿAದ ಜುರುಗಿತು. ಇದಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಚಂದ್ರಮಾನ ಯುಗಾದಿ ಹಬ್ಬದ ದಿನದಂದು ಬೆಳಿಗ್ಗೆಯೇ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಚಿಕ್ಕದೇವಮ್ಮನ ಬೆಟ್ಟದಿಂದ ಅಮ್ಮನವರ ಉತ್ಸವ ಮೂರ್ತಿಯನ್ನು ಕರೆತಂದು ನದಿ ಬಳಿಯ ಹಾಲುಗಡುವಿನ ಜಪದಕಟ್ಟೆಯಲ್ಲಿ ಕೂರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಜಪದಕಟ್ಟೆಯಲ್ಲಿ ಕೂರಿಸಿದ ಬಳಿಕ ದೇವರಿಗೆ ಹೋಮ-ಹವನಗಳು ನಡೆದವು. ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಾದ್ಯಗೋಷ್ಠಿಗಳು ಮೊಳಗಿದವು. ಸುಮಾರು ೧೦ಕ್ಕೂ ಹೆಚ್ಚು ಸತ್ತಿಗೆಗಳು ಮೆರವಣಿಗೆ ನಡೆಸಲಾಯಿತು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಾಡಲಾದ ಹರಕೆಯನ್ನು ತೀರಿಸಿದರು.
ಸರಗೂರಿನ ಪೊಲೀಸ್ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್.ಪಿಎಸ್‌ಐ ಕಿರಣ್.ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಸಮಿತಿಯಿಂದ ಜಾತ್ರಾವರಣದಲ್ಲಿ ಯಾವುದೇ ಪ್ರಾಣಿಬಲಿ ಮಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಿದ್ದು, ಪ್ರಾಣಿಬಲಿ ಆಗದಂತೆ ತಡೆಹಿಡಿಯುವಲ್ಲಿ ಯಶಸ್ವಿಯಾದರು.
ಹರಕೆ ಹೊತ್ತ ಭಕ್ತರು ತಲೆ ಮೂಡಿ ಮಾಡಿಸಿದರು. ಅಂಗಡಿ ಮುಗ್ಗಟ್ಟುಗಳು ಇದ್ದವು. ಬೆಟ್ಟದ ಬರುವ ಭಕ್ತರಿಗೆ ಖಾಸಗಿ ವಾಹನಗಳನ್ನು ನಿಷೇಧಿಸಿ, ಹ್ಯಾಂಡ್‌ಪೋಸ್ಟ್, ಸರಗೂರಿನಿಂದ ವಾಹನದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವತೆ ದರ್ಶನ ಪಡೆದು ಪುನೀತರಾದರು. ಬೆಟ್ಟದ ಪ್ರಧಾನ ಆರ್ಚಕರುಗಳು ಪೂಜಾ ವಿಧಿವಿಧಾನ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಹಾಲುಗಡ ಜಾತ್ರಾ ಕಮಿಟಿ ಪದಾಧಿಕಾರಿಗಳು, ಬೆಟ್ಟದ ಸುತ್ತ-ಮುತ್ತಲಿನ ಗ್ರಾಮಸ್ಥರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗಿಯಾಗಿದ್ದರು.
ಇದೆ ಸಂರ್ಭದಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ ಜಾತ್ರಾ ಮಾಳದಲ್ಲಿ ಭಾಕ್ತಾದಿಗಳಿಗೆ ಪ್ರಾಣಿ ಬಲಿ ಮಾಡಬಾರದು ಎಂದು ಅರಿವು ಮೂಡಿಸಿದರು.
ಜಾತ್ರಾ ಮಾಳದ ಸುತ್ತಮುತ್ತಲು ಎಲ್ಲಾ ಕಡೆÀಯಲಿ ್ಲ ಪ್ರಾಣಿ ಬಲಿ ಮಾಡಬಾರದು ಎಂದು ಜಾತ್ರಾ ಸುತ್ತಲು ಪರಿಶೀಲನೆ £ಡೆಸಿ. ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಾತ್ರ ಸಮಿತಿ ಅಧ್ಯಕ್ಷ ದೋಡ್ಡವೀರನಾಯಕ,ಯಜಮಾರಗಳಾದ ನಾಗರಜು,ನಿಂಗರಾಜು, ಬಸವನಾಯಕ, ಕೆ.ಬಿ.ಬೆಟ್ಟನಾಯಕ, ಮುಖಂಡರಾದ ಸಿದ್ದರಾಜು, ಜಯರಾಮ್, ಮಾಜಿ ಗ್ರಾಪಂ ಸದ್ಯಸ ಎನ್ ಬಸವನಾಯಕ, ಬಿ ಬಸವನಾಯಕ, ಬಿ ಮಾಜಿ ಯಜಮಾರು ಬಿ ರಾಮನಾಯಕ, ಬೆಟ್ಟನಾಯಕ, ಚಿಕ್ಕದೇವಮ್ಮನ ಬೆಟ್ಟದ ಪಾರುತ್ತೆದಾರು ಮಹದೇವಸ್ವಾಮಿ, ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಕಿರಣ್,ಬೆಟ್ಟದ ಆರ್ಚಕರು ಇನ್ನೂ ಇಟ್ನಾ ಗ್ರಾಮಸ್ಥರು ಭಾಗವಹಿಸಿದ್ದರು.