ಸರಗೂರು ತಾಲೂಕಿನ ಬಾಬು ಜಗಜೀವನರಾಂ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಖಾಲಿ ಚೇರುಗಳು. 
ಮೈಸೂರು

ಗೈರು ಹಾಜರಾದ ತಹಸಿಲ್ದಾರ್ ಹಾಗೂ ಅಧಿಕಾರಿಗಳು

ಎ. ಆರ್. ರಘುರಾಮ
ನಂತರ ಮಾತನಾಡಿದ ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕೊತ್ತೇಗಾಲ ತಿಮ್ಮಯ್ಯ ರವರು ಸಭೆಯನ್ನು 11 ಗಂಟೆಗೆ ಸಭೆಯನ್ನು ನಿಗದಿ ಮಾಡಿ 1 ಗಂಟೆ ಯಾದರೂ ಸಭೆಗೆ ಬರಲಿಲ್ಲ.
ತಹಸೀಲ್ದಾರ್ ರವರು ಅವರೇ ಪೂರ್ವ ಭಾವಿ ಸಭೆಯ ದಿನಾಂಕವನ್ನು ನಿಗದಿ ಪಡಿಸಿ ಅವರೇ ಸಭೆಗೆ ಬಾರದೆ ನಮ್ಮ ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡಿದ್ದಾರೆ ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆ ರವರು ಸಮಿತಿ ಕಾರ್ಯದರ್ಶಿ ಯಾಗಿದ್ದು ಅವರು ಕೂಡಾ ಮುಖಂಡರಿಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಅದು ಕಾರಣವಾಗಿದೆ ಎಂದರು.
ಬಾಬು ಜಗಜೀವನರಾಂ ಹಾಗೂ ಡಾ ಬಿ ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಸಭೆಗಳಲ್ಲೂ ಅಧಿಕಾರಿಗಳ ಗೈರು ಹಾಜಯಿಂದಾಗಿ ಸಭೆಯನ್ನು ಮುಂದೂಡಲು ತಿರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ಕಾಣೆಯಾದರು.
ಸಭೆಗಳನ್ನು ಮಾಡಬೇಕಾದರೆ ಬೆರಷ್ಟಿಕ್ಕೆ ಅಧಿಕಾರಿಗಳು ಬರುತ್ತಾರೆ. ರಾಷ್ಟ್ರ ನಾಯಕರ ಜಯಂತಿ ಪೂರ್ವಭಾವಿ ಸಭೆಗೆ ತಾಲ್ಲೂಕಿನ ಶಾಸಕರು ಕೂಡ ಬರುವುದಿಲ್ಲ.ಅಧಿಕಾರಿಗಳು ಸಭೆಗಳನ್ನು ಮಾಡಬೇಕಾದರೆ ಕಡಚಾರಕ್ಕೆ ಸಭೆಯನ್ನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಯಂತಿಯನ್ನು ಚರ್ಚಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಸಭೆಗೆ ಸಮಾಜದ ಯಜಮಾನರು, ಅಧ್ಯಕ್ಷರು, ಸಂಘ ಸಂಸ್ಥೆಗಳು ಸದಸ್ಯರೆಲ್ಲ ಹಾಜರಿದ್ದರೂ ಸಭೆಗೆ ಬರಬೇಕಾದ ಅಧಿಕಾರಿಗಳು ಬರಲೇ ಇಲ್ಲ. ಅಧಿಕಾರಿಗಳಿಲ್ಲದೆ ಸಭೆ ಪೂರ್ಣವಾಗುವುದಿಲ್ಲ. ಯಾವ ಪುರುಷಾರ್ಥಕ್ಕಾಗಿ ಸಭೆ ಮಾಡುತ್ತಿರಾ ಎಂದು ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಪುಟ್ಟ ಹನುಮಯ್ಯ, ಶ್ರೀನಿವಾಸ, ದಸಂಸ ಮುಖಂಡರಾದ ಕೂಡಗಿ ಗೋವಿಂದರಾಜು,ಅಣ್ಣಯ್ಯಸ್ವಾಮಿ, ಶಿವಕುಮಾರ್ , ಇನ್ನೂ ಮುಖಂಡರು ಸೇರಿದಂತೆ ಕೆಲವು ಅಧಿಕಾರಿಗಳು ಭಾಗಿಯಾಗಿದ್ದರು.