ಬನ್ನೂರಿನ ಪುರಸಭೆ ಆವರಣದಲ್ಲಿ ಪುರಸಭೆ ಅಧ್ಯಕ್ಷ ಕೃಷ್ಣೇಗೌಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಸೌಮ್ಯಾ ಮುರಳೀಧರ್, ಶೋಭಾ ಸತೀಶ್, ಆನಂದ್, ಮಹೇಶ್ ಇತರರು ಇದ್ದರು.  
ಮೈಸೂರು

ಹೊಲಿಗೆ ಯಂತ್ರ ಮಹಿಳಾ ಸ್ವಾವಲಂಬನೆಗೆ ಸಹಕಾರಿ

ವಸಂತಕುಮಾರ್ ಬಿ
ಬನ್ನೂರು: ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಬನ್ನೂರಿನ ಹಿಂದುಳಿದ, ಅಲ್ಪಸಂಖ್ಯಾತ, ಬಡ ಮಹಿಳೆಯರಿಗೆ 180 ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದು ಬನ್ನೂರು ಪುರಸಭೆ ಅಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಏರ್ಪಡಿಸಿದ್ದ 2022-23ನೇ ಸಾಲಿನ ಅಮೃತ ನಗರಪಾಲ್ ಯೋಜನೆಯಡಿ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಹೊಲಿಗೆ ಯಂತ್ರದ ತರಬೇತಿ ಪಡೆದುಕೊಂಡಿರುವುದರಿಂದ ಅವರ ಬದುಕಿಗೆ ನೆರವಾಗಲಿದೆ ಎಂದರು. ಇದೇ ವೇಳೆ ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ಪುರಸಭೆ ಉಪಾಧ್ಯಕ್ಷೆ ಸೌಮ್ಯಾ ಮುರಳೀಧರ್ ಮಾತನಾಡಿ, ಹೊಲಿಗೆ ಯಂತ್ರಗಳು ಬಂದು ಈಗಾಗಲೇ 5 ತಿಂಗಳು ಕಳೆಯುತ್ತಿದ್ದರೂ ಅದನ್ನು ವಿತರಿಸಲು ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದರು.

ಪುರಸಭಾ ಇಒ ಹೇಮಂತ್‌ರಾಜ್, ಸಮುದಾಯ ಸಂಘಟನಾ ಅಧಿಕಾರಿ ಪುಟ್ಟರಾಜು, ವಿನುತಾ, ಪರಿಸರ ಅಭಿಯಂತರ ನಸೀಮ ಅಂಜುಂ, ಎಸ್.ಭಾಗ್ಯ, ಎಂ.ಕೆ. ಮಹೇಶ್, ಬಿ.ಕೆ. ಆನಂದ, ಬಿ.ಎಸ್. ಶೃತಿ, ನಂಜುಂಡಸ್ವಾಮಿ, ಬಿ.ಆರ್. ಶ್ರೀನಿವಾಸ್, ಅನಂತಮೂರ್ತಿ, ಶೋಭಾ ಸತೀಶ್, ನಾಗರತ್ನ ಪ್ರಭಾಕರ್, ದಿವ್ಯಾ ಪೈಲ್ವಾನ್‌ಚಂದ್ರು, ಫೀರ್ಧೋಸ್, ಫೀರ್‌ಖಾನ್, ಭಾಗ್ಯಶ್ರೀ, ಬಿ.ಎಸ್. ಲೋಕಾಂಬಿಕಾ, ಪುಷ್ಪಾವತಿ, ಮೂರ್ತಿ, ಬಿ.ಕೆ. ಶಾಂತರಾಜು, ಶಿವಣ್ಣ, ಚೆಲುವರಾಜು, ಸಿ.ಎಚ್.ವಿಜಯ್‌ಕುಮಾರ್, ಸಿ.ಸಿ. ಸುರೇಶ, ಬಿ.ಎಂ. ಮಹೇಶ, ನಾಗರಾಜಾಚಾರ್, ಅಸದ್‌ಅಲಿ ಇತರರು ಇದ್ದರು.