ಎಸ್.ಆನಂದ್ 
ಮೈಸೂರು

ತೀವ್ರವಾಗಿ ಗಾಯಗೊಂಡಿದ್ದ ಸೆಸ್ಕ್ ನೌಕರ ಸಾವು

ಎಂ.ರವಿ
ಹುಣಸೂರು: ಹುಣಸೂರು ಸೆಸ್ಕ್ ಉಪಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಅವಘಡದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸಹಾಯಕ ಇಂಜಿನಿಯರ್ ಎಸ್.ಆನಂದ್(41)ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಗ್ಗೆ ನಿಧನರಾದರು.
ಅವರಿಗೆ ಪತ್ನಿ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಡಿ.9ರಂದು ನಗರದ ಸೆಸ್ಕ್ ಉಪ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 20 ದಿನಗಳ ಸಾವು-ಬದುಕಿನ ಹೋರಾಟದ ನಂತರ ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಹುಟ್ಟೂರು ಧರ್ಮಾಪುರದಲ್ಲಿ ಸಂಜೆ ನಡೆಯಿತು.