ಎಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಎಚ್.ಶಿವರಾಜಪ್ಪ, ಸಂತೋಷ್ ಚಕ್ಕೋಡಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಭಾಸ್ಕರ್, ಕೃಷ್ಣೇಗೌಡ, ಹರೀಶ್‌ಗೌಡ, ನರಸಿಂಹೇಗೌಡ ಇದ್ದರು.
ಎಚ್.ಡಿ.ಕೋಟೆ: ವಿದ್ಯಾರ್ಥಿಗಳು ಸಾಧಕರ ಆದರ್ಶಗಳನ್ನು ಅನುಸರಿಸಿ ಕಲಿತಾಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ಎಚ್.ಶಿವರಾಜಪ್ಪ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬುಧವಾರ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮೈಸೂರು ಜಿಲ್ಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಆದರ್ಶವನ್ನಿಟ್ಟುಕೊಂಡು ವ್ಯಾಸಾಂಗ ಮಾಡಿದ್ದು ಆರೇಳು ವಿದ್ಯಾರ್ಥಿಗಳು ನ್ಯಾಯಾಧೀಶರಾಗಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವ್ಯಕ್ತಿ ಚಿರಿಂಜೀವಿಯಾಗಿ ಉಳಿಯುವುದಿಲ್ಲ, ಆತನ ಆಲೋಚನೆಗಳು ಮತ್ತು ಆತನ ಸಾಧನೆಗಳು ಚಿರಂಜೀವಿಯಾಗಿ ಉಳಿಯುವಂತೆ ಸಾಧಿಸಬೇಕು ಎಂದರು.
ಬಿ.ಮಟಕೆರೆ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಚಕ್ಕೋಡಿ ಮಾತನಾಡಿ, ಜ್ಞಾನವನ್ನು ಸರಿಯಾದ ರೀತಿಯಲ್ಲಿ ಅರಿತವ ಮನುಷ್ಯನಾಗುತ್ತಾನೆ. ಸರಿಯಾದ ರೀತಿ ಅರ್ಥೈಸಿಕೊಳ್ಳದ ವ್ಯಕ್ತಿ ಸಮಾಜಕ್ಕೆ ಮಾರಕವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ನಾವು ಈ ಹಿಂದೆ ಸಮಾಜಕ್ಕೆ ಏನು ನೀಡಿದ್ದೇವೆ ಮತ್ತು ಮುಂದೆ ಸಮಾಜಕ್ಕೆ ಏನು ನೀಡುತ್ತೇವೆ ಎಂದು ಯೋಚಿಸಿದಾಗ ನಾವು ಬೆಳೆಯಲು ಸಾಧ್ಯ. ಜಗತ್ತು ನಮ್ಮ ವೈಫಲ್ಯವನ್ನು ಗುರುತಿಸುತ್ತದೆ ಹೊರತು, ನಮ್ಮ ಬೆಳವಣಿಗೆಯನ್ನಲ್ಲ ಎಂದರು.
ಕಾಲೇಜು ಸಮಿತಿಯ ಭಾಸ್ಕರ್, ಕೃಷ್ಣೇಗೌಡ, ಹರೀಶ್‌ಗೌಡ, ನರಸಿಂಹೇಗೌಡ, ಸುಭಾಷ್, ಪ್ರೊ.ಚಂದ್ರೇಗೌಡ, ಪ್ರಾಂಶುಪಾಲ ಭೈರೇಗೌಡ, ರಾಜೇಶ್, ಭೈರಪ್ಪ, ಲೋಕೇಶ್, ಮಲ್ಲೇಶ್, ಸೋಮಶೇಖರ್, ರಾಜೇಶ್‌ಗೌಡ, ಚನ್ನಬಸಪ್ಪ, ಸತೀಶ್, ಅನಿಲ್ ಕುಮಾರ್, ವೆಂಕಟರಾಜು, ಮಧು, ನಂದಿನಿ, ಪಲ್ಲವಿ, ಶಾಂಭವಿ, ಪುಷ್ಪಾ, ತಾರಾ, ಕಾವ್ಯಾ, ರಶ್ಮಿ, ಗಾಯತ್ರಿ, ಅನಿಲ್ ಕುಮಾರ್, ಸುಬ್ರಹ್ಮಣ್ಯ, ಮಂಜೇಶ್, ಅಂಕನಾಯಕ ಇದ್ದರು.