ಜಯನಗರದ ಶ್ರೀವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ವಿವೇಕ ಬಾಲೋದ್ಯಾನ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಶ್ರೀನಿವಾಸ್‌ಬಾಬು, ಎಂ.ಎಸ್.ನಾಗೇಶ್, ಭವಾನಿ ನಾಗೇಶ್, ಎಚ್.ಎಂ.ಸುಮಾ ಇತರರು ಇದ್ದರು. 
ಮೈಸೂರು

ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಅವಶ್ಯ: ಹಿರಿಯ ಅಧ್ಯಾಪಕ ಶ್ರೀನಿವಾಸ್‌ಬಾಬು ಅಭಿಮತ

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನವನ್ನ ಕಡೆಗಣಿಸಿ ಮನುಷ್ಯ ಬದುಕಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ಸಂಶೋಧನೆಗಳು ನಡೆಯುತ್ತಿವೆ
  • ಜೀವನದಲ್ಲಿ ಮಾಡುವ ಪ್ರತಿಯೊಂದು ಕಾರ್ಯದ ಹಿಂದೆ ವಿಜ್ಞಾನವಿದೆ. ಅದನ್ನು ನಾವು ವೀಕ್ಷಣೆ ಮಾಡಬೇಕು ಹಾಗೂ ಅದನ್ನು ಬರೆದಿಟ್ಟುಕೊಳ್ಳಬೇಕು
ಮೈಸೂರು: ಜಯನಗರದ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ವಿವೇಕ ಬಾಲೋದ್ಯಾನ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ರಾಮಕೃಷ್ಣ ವಿದ್ಯಾಶಾಲಾದ ರಸಾಯನಶಾಸ್ತ್ರ ಹಿರಿಯ ಅಧ್ಯಾಪಕ ಶ್ರೀನಿವಾಸ್‌ಬಾಬು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಬದುಕಿನ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನವನ್ನ ಕಡೆಗಣಿಸಿ ಮನುಷ್ಯ ಬದುಕಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ಸಂಶೋಧನೆಗಳು ನಡೆಯುತ್ತಿವೆ ಎಂದರು.
ಅಂತಹ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಬೇಕಾದರೆ ನೀವು ವಿಜ್ಞಾನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಮಕ್ಕಳಿಗೆ ಅಧ್ಯಯನದ ಮೂಲಕ ತಿಳಿಸಿಕೊಡಬೇಕು. ಅಡುಗೆ ಮನೆಯಲ್ಲಿ ತಾಯಂದಿರು ಮಾಡುವ ಅಡುಗೆ ತಿಂಡಿಗಳ ತಯಾರಿಯಲ್ಲೂ ವಿಜ್ಞಾನ ಅಡಗಿರುತ್ತದೆ ಎಂದು ಹೇಳಿದರು.
ಜೀವನದಲ್ಲಿ ಮಾಡುವ ಪ್ರತಿಯೊಂದು ಕಾರ್ಯದ ಹಿಂದೆ ವಿಜ್ಞಾನವಿದೆ. ಅದನ್ನು ನಾವು ವೀಕ್ಷಣೆ ಮಾಡಬೇಕು ಹಾಗೂ ಅದನ್ನು ಬರೆದಿಟ್ಟುಕೊಳ್ಳಬೇಕು ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಬೇಕು ಎಂದು ಹೇಳಿದರು.
ಯಾವುದನ್ನೇ ಆದರೂ ವೈಜ್ಞಾನಿಕ ರೀತಿಯಲ್ಲಿ ಕಲಿಯಿರಿ. ಈ ನಿಟ್ಟಿನಲ್ಲಿ ಬಾಲೋದ್ಯಾನ ಶಾಲೆಯು ತಮ್ಮೆಲ್ಲರಿಗೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಒಳ್ಳೆಯ ಜ್ಞಾನವನ್ನು ಒದಗಿಸಕೊಡುತ್ತಾ ಬಂದಿರುವುದು ನನಗೆ ಸಂತೋಷವೆನಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎಸ್.ನಾಗೇಶ್ ಮಾತನಾಡಿ, ವಿಜ್ಞಾನ ಎಂಬುದು ನಾವು ಉಸಿರಾಡೋ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ ಹೀಗೆ ಎಲ್ಲ ಕಡೆಯಲ್ಲೂ ಆವರಿಸಿದೆ. ವಿಜ್ಞಾನ ನಮ್ಮ ಪ್ರತಿಭೆಯನ್ನು ಪಾರದರ್ಶಕಗೊಳಿಸುತ್ತದೆ. ನಿಮ್ಮ ಈ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ತಯಾರಿಯನ್ನು ನಾನು ಗಮನಿಸಿದಾಗ, ವಿಜ್ಞಾನದ ಬಗ್ಗೆ ನಿಮ್ಮಲ್ಲಿರುವ ಆಸಕ್ತಿಯನ್ನು ಕಂಡು ನನಗೆ ಖುಷಿಯಾಗಿದೆ ಎಂದರು.
ಶಾಲೆಯ ಮುಖ್ಯ ಆಡಳಿತ ಅಧಿಕಾರಿ ಭವಾನಿ ನಾಗೇಶ್, ಪ್ರಾಂಶುಪಾಲೆ ಎಚ್.ಎಂ.ಸುಮಾ, ಶ್ರೀವಿವೇಕ ಎಕ್ಸೆಲ್ ಅಕಾಡೆಮಿಯ ಬಸವರಾಜು, ಗಾಯತ್ರಿ, ವಿವೇಕ ಬಾಲೋದ್ಯಾನ ಶಾಲೆಯ ಶಿಕ್ಷಕರಾದ ವಿಶ್ವಾಸ್, ಪ್ರೇಮ್ ಕುಮಾರ್, ಪುಷ್ಪಾ, ಶ್ವೇತಾ, ಮಲ್ಲಿಕಾರಾವ್, ಸೌಮ್ಯಾ, ಭುವನೇಶ್ವರಿ, ಲತಾ, ಭಾನುಮತಿ, ಶ್ರುತಿ, ಸುಬ್ರಮಣ್ಯ, ಸೃಷ್ಟಿ ಇತರರು ಇದ್ದರು.
ಪ್ರೀ ಕೆಜಿಯಿಂದ 10ನೇ ತರಗತಿಯ ವರೆಗಿನ ಎಲ್ಲ ವಿದ್ಯಾರ್ಥಿಗಳು ವಿವಿಧ ಬಗೆಯ ವಿಜ್ಞಾನದ ಮಾದರಿಗಳು, ವರ್ಕಿಂಗ್ ಮಾಡೆಲ್ಗಳನ್ನು ಪ್ರದರ್ಶಿಸಿದರು.