ಹುಣಸೂರು ತಾಲೂಕು ಕರಿಮುದ್ದನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪದವಿಪೂರ್ವ(ಶಾಲಾ)ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂಪಿ.ನಾಗಮ್ಮರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಈಶ್ವರಪ್ಪ, ಕೆಂಡಗಣ್ಣ, ಮಹದೇವ, ಬಿ.ಎಸ್.ರಂಗನಾಥ್, ಶ್ರೀನಿವಾಸ, ಆನಂದಮೂರ್ತಿ ಇತರರಿದ್ದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಅಭಿಮತ
ಹುಣಸೂರು: ಶಾಲೆ ಎನ್ನುವುದು ಸಮಾಜಕ್ಕೆ ಸತ್ರ್ಪಜೆಯನ್ನು ರೂಪಿಸುವ ಮುಖ್ಯ ಅಂಗವಾಗಿದೆ ಎಂದು ಪದವಿಪೂರ್ವ(ಶಾಲಾ)ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 2025ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಚಟುವಟಿಕೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಎನ್ನುವುದು ಮನುಷ್ಯನನ್ನು ಮನುಷ್ಯನನ್ನಾಗಿಸುವ ಸಾಧನವಾಗಿದೆ. ವಿದ್ಯೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿ. ಮಾತ್ರವಲ್ಲದೇ ವಿದ್ಯೆಯ ಮೂಲಕವೇ ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ಮುಖ್ಯ ಅಂಗವಾಗಿದೆ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರ, ಸನ್ನಡತೆಯನ್ನು ಕಲಿತು ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕೆಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಚ್.ಕೆಂಡಗಣ್ಣ, ಪ್ರಾಂಶುಪಾಲ ಈಶ್ವರಪ್ಪ ಮಾತನಾಡಿದರು. ಇದೇ ವೇಳೆ 2025ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಕೆಂಡಗಣ್ಣೇಗೌಡ, ಎನ್.ಮಂಜು. ಆನಂದಮೂರ್ತಿ, ಶ್ರೀನಿವಾಸ, ಉಪನ್ಯಾಸಕರಾದ ಮಹದೇವ, ಬಿ.ಎಸ್.ರಂಗನಾಥ್. ಮಹದೇವಶೆಟ್ಟಿ, ಮುಖ್ಯಶಿಕ್ಷಕಿ ಸ್ವಾತಿಕುಮಾರಿ, ಸಿ.ಜಿ.ವಿನೋದಾ, ಮಾಲತಿ, ರಾಜೇಶ್ವರಿ. ಸಪ್ನಾ ಉನ್ನಿಪ್ರಸಾದ್ ಹಾಜರಿದ್ದರು.